Site icon Suddi Belthangady

ಸುನ್ನೀ ಕೋ ಆರ್ಡಿನೇಶ‌ನ್ ಸಮಿತಿಯಿಂದ “ಗ್ರ್ಯಾಂಡ್ ಹುಬ್ಬರ್ರಸೂಲ್ ಮಜ್ಲಿಸ್” ಸಂಪನ್ನ- ಸಯ್ಯಿದರುಗಳ ಅಪೂರ್ವ ಸಂಗಮ

ಬೆಳ್ತಂಗಡಿ: ಸುನ್ನೀ ಕೋ-ಆರ್ಡಿನೇಶನ್ ಸಮಿತಿ ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಪ್ರವಾದಿ ಪೈಗಂಬರ್ ಅವರ 1500 ನೇ ಜನ್ಮ ದಿನಾಚರಣೆಯ ಪ್ರಯುಕ್ತ “ಗ್ರ್ಯಾಂಡ್ ಹುಬ್ಬುರ್ರಸೂಲ್ ಮಜ್ಲಿಸ್‌” ಎನ್ನುವ ವಿಶೇಷ ಮೌಲಿದ್ ಪಾರಾಯಣ ಹಾಗೂ ಬುರ್ದಾ ಧಾರ್ಮಿಕ ಕಾರ್ಯಕ್ರಮ ಸೆ.23 ರಂದು ಗುರುವಾಯನಕೆರೆ ಮಂಜುಬೆಟ್ಟು ಎಫ್.ಎಮ್ ಗಾರ್ಡನ್ ನಲ್ಲಿ ಅಭೂತಪೂರ್ವವಾಗಿ ಸಂಪನ್ನಗೊಂಡಿತು.

ಸಭಾ ಕಾರ್ಯಕ್ರಮ ಹೊರತುಪಡಿಸಿದ ಆಧ್ಯಾತ್ಮಿಕ ಅನುಭೂತಿಯ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಪ್ರವಾದಿಯವರ ನಾಮಸಂಕೀರ್ತನೆಯ ಬುರ್ದಾ ಆಲಾಪನೆ, ನ‌ಅತ್ ಶರೀಫ್ ಆಲಾಪನೆ, ಮದ್‌ಹ್ ಗೀತೆಗಳ ಗಾಯನ, ಮೌಲಿದ್ ಪಾರಾಯಣ ಇತ್ಯಾದಿಗಳು ಕ್ರಮಬದ್ಧವಾಗಿ ನಡೆಯಿತು.

ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ‌ ನಡೆದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಜಾಮಿಯಾ ಸ‌ಅದಿಯಾ ಅರಬಿಯಾ ಕಾಲೇಜು ಹಿರಿಯ ಮುದರ್ರಿಸ್ ಸ್ವಾಲಿಹ್ ಸ‌ಅದಿ ದುಆ ಆಶೀರ್ವಚ ನೀಡಿದರು.
ಸುನ್ನೀ ಕೋ ಆರ್ಡಿನೇಷನ್ ಸಮಿತಿ ಅಧ್ಯಕ್ಷ ಸಯ್ಯಿದ್ ಸಾದಾತ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಉಪಾಧ್ಯಕ್ಷ ಸಯ್ಯಿದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ಮನ್ಶರ್, ಸಯ್ಯಿದ್ ಉಜಿರೆ ತಂಙಳ್ (ಮಲ್‌ಜ‌ಅ), ಸಯ್ಯಿದ್ ವಾದಿ ಇರ್ಫಾನ್ ತಂಙಳ್, ಸಯ್ಯಿದ್ ಅಬ್ದುಸ್ಸಲಾಂ ತಂಙಳ್, ಸಯ್ಯಿದ್ ಎಸ್.ಎಂ‌ ತಂಙಳ್, ಸಯ್ಯಿದ್ ಕರ್ಪಾಡಿ ತಂಙಳ್, ಸಯ್ಯಿದ್ ವೇಣೂರು ತಂಙಳ್, ಶಹೀರ್ ತಂಙಳ್ ನಾವೂರು, ಸವಾದ್ ತಂಙಳ್ ಉಜಿರೆ, ಸಲೀಂ ತಂಙಳ್ ಸಬರಬೈಲು, ಮೆಹಬೂಬ್ ತಂಙಳ್ ಎರ್ಮಾಳ, ಡಾ.‌ಕಾವಳಕಟ್ಟೆ ಹಝ್ರತ್, ಅಬೂಸ್ವಾಲಿಹ್ ಉಸ್ತಾದ್ ಕಿಲ್ಲೂರು, ಕೃಷ್ಣಾಪುರ ಇಬ್ರಾಹಿಂ ಮುಸ್ಲಿಯಾರ್, ಯಾಕೂಬ್ ಉಸ್ತಾದ್ ಮದ್ದಡ್ಕ ಒಳಗೊಂಡಂತೆ ವಿದ್ವಾಂಸರುಗಳು ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡರು.
ಆರಿಫ್ ಸ‌ಅದಿ ಬಳಗದವರು ಮೌಲಿದ್ ಮತ್ತು ಮದ್‌ಹ್ ಆಲಾಪನೆ ನಡೆಸಿಕೊಟ್ಟರು.

ಡಾ. ಎಂ.ಎಸ್.ಎಂ ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಶುಭಹಾರೈಸಿದರು. ಈ ಸಮಾರಂಭದಲ್ಲಿ ತಾಲೂಕಿನ ವಿವಿಧ ಮೊಹಲ್ಲಾಗಳ ಆಡಳಿತ ಮಂಡಳಿ ಪ್ರತಿನಿಧಿಗಳು, ಜಮಾಅತ್ ಬಾಂಧವರು, ಧಾರ್ಮಿಕ ವಿದ್ಯಾಭ್ಯಾಸ ನಿರತರಾಗಿರುವ ವಿದ್ಯಾರ್ಥಿಗಳು (ಮುತ‌ಅಲ್ಲಿಮ್‌ಗಳು), ಸುನ್ನೀ ಸಮೂಹ‌ ಸಂಘಟನೆಗಳಾದ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್.ಎಸ್.ಎಫ್), ಸುನ್ನೀ ಯುವಜನ ಸಂಘ (ಎಸ್‌.ವೈ.ಎಸ್),‌ ಕರ್ನಾಟಕ ಮುಸ್ಲಿಂ ಜಮಾಅತ್ (ಕೆ.ಎಮ್‌.ಜೆ), ಸುನ್ನೀ‌ ಮೆನೇಜ್‌ಮೆಂಟ್ ಅಸೋಸಿಯೇಷನ್ (ಎಸ್‌.ಎಮ್‌.ಎ), ಸುನ್ನೀ‌ ಜಂ ಇಯ್ಯತುಲ್ ಉಲೆಮಾ (ಎಸ್‌.ಜೆ.ಯು), ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್‌.ಜೆ.ಎಮ್.), ಅನಿವಾಸಿ ಭಾರತೀಯ ಸಂಘಟನೆ ಕರ್ನಾಟಕ ಕಲ್ಚರಲ್ ಪೌಂಡೇಷನ್(ಕೆಸಿಎಫ್) ಮೊದಲಾದ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು.

ಶಿಸ್ತುಬದ್ಧ ವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಅತಿಥಿ ಸತ್ಕಾರದ ಭಾಗವಾಗಿ ಆಗಮಿಸಿದ ಎಲ್ಲರಿಗೂ ಲಘು ಉಪಾಹಾರ ಹಾಗೂ ಮಧ್ಯಾಹ್ನದ ಭೊಜನದ ವ್ಯವಸ್ಥೆ ಮಾಡಲಾಗಿತ್ತು.

ಸುನ್ನೀ ಕೋರ್ಡಿನೇಷನ್ ಕಮಿಟಿ ಕಾರ್ಯಾಧ್ಯಕ್ಷ ಜಿ.ಕೆ. ಉಮರ್ ಗುರುವಾಯನಕೆರೆ, ಕಾರ್ಯದರ್ಶಿ ಸಲೀಂ ಕನ್ಯಾಡಿ, ಕೋಶಾಧಿಕಾರಿ ಮುಹಮ್ಮದ್ ರಫಿ ಬೆಳ್ತಂಗಡಿ, ಪ್ರಮುಖರಾದ ಅಬ್ಬೋನು ಮದ್ದಡ್ಕ, ಅಬ್ಬಾಸ್ ಬಡ್ಲಡ್ಕ, ಬಿ.ಎಮ್. ಹಮೀದ್ ಉಜಿರೆ, ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು, ಫಾರೂಕ್ ಸಖಾಫಿ ವೇಣೂರು, ಅಶ್ರಫ್ ಸಖಾಫಿ ಮಾಡಾವು, ಕೆ.ಕೆ ಶಾಹುಲ್ ಹಮೀದ್, ಬಿ.ಎ. ನಝೀರ್, ಉಮರ್‌ಕುಂಞಿ ನಾಡ್ಜೆ, ಹಂಝ ಮದನಿ, ಅಬ್ದುರ್ರಹ್ಮಾನ್ ಸಖಾಫಿ ಆಲಂದಿಲ, ಅಲಿ ತುರ್ಕಳಿಕೆ, ಅಶ್ರಫ್ ಆಲಿಕುಂಞಿ ಮುಂಡಾಜೆ, ಆದಂ ಕುಪ್ಪೆಟ್ಟಿ, ಯಾಕೂಬ್ ಉರ್ವಾಲ್‌ಪದವು, ಮುಹಮ್ಮದ್ ಕುಂಞಿ ಜೋಗಿಬೆಟ್ಟು, ಚಾರ್ಮಾಡಿ ಹಸನಬ್ಬ, ಸಾದಿಕ್ ಮಾಸ್ಟರ್ ಮಲೆಬೆಟ್ಟು, ಶಾಕಿರ್ ಹಾಜಿ ಮೊದಲಾದವರು ಉಪಸ್ಥಿತರಿದ್ದರು.

ಸಭೆಯಲ್ಲಿ ಭಾಗವಹಿಸಿದ್ದ ವಕ್ಫ್ ಜಿಲ್ಲಾ ಅಧಿಕಾರಿ ಅಬೂಬಕ್ಕರ್ ಹಾಜಿ ಅವರು‌ ಪ್ರಸ್ತುತ ನಮ್ಮ ಮುಂದಿರುವ ಜಾತಿ, ಸಾಮಾಜಿಕ ಆರ್ಥಿಕ ಗಣತಿಯ ಬಗ್ಗೆ ಮಾಹಿತಿ ನೀಡಿದರು. ಕಡತದಲ್ಲಿರುವ ಪ್ರಶ್ನೆಗಳಿಗೆ ನೀಡಬೇಕಾದ ಸಮರ್ಪಕ ಉತ್ತರದ ಬಗ್ಗೆಯೂ ಗಮನಸೆಳೆದರು.

Exit mobile version