ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿಯ ಜೇಸಿ ಸಪ್ತಾಹ ಅಂಗವಾಗಿ ತರಬೇತಿ ದಿನವನ್ನು ಆಚರಿಸಲಾಯಿತು. ಉಜಿರೆಯ ಆದಿಗುರು ಕೌಶಲ್ಯ ಕೇಂದ್ರದಲ್ಲಿ ಮಹಿಳೆಯರಿಗಾಗಿ ಕೌಶಲ್ಯ ಅಭಿವೃದ್ಧಿ ತರಬೇತಿ ಹಾಗೂ ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಉದ್ಯಮ ಕೌಶಲ್ಯದ ಬಗ್ಗೆ ತರಬೇತಿ ಹಮ್ಮಿಕೊಳ್ಳಲಾಯಿತು.
ವಲಯ ತರಬೇತುದಾರ ಪುತ್ತೂರಿನ ಮರಿಕ್ಕೆ ಸಾವಯುವ ಮಳಿಗೆಯ ಮಾಲಕ ಜೆಸಿಐ ವಲಯ 15ರ ವಲಯ ಉಪಾಧ್ಯಕ್ಷ ಸುಹಾಸ್ ಮರಿಕೆ ಅವರು ತರಬೇತಿ ನಡೆಸಿಕೊಟ್ಟರು. ಉಜಿರೆ ರುಡ್ ಸೆಟ್ ನ ನಿರ್ದೇಶಕ ಅಜೇಯ, ಉಪನ್ಯಾಸಕ ಜೇಮ್ಸ್ ಅಬ್ರಹಾಂ, ಕರುಣಾಕರ ಜೈನ್, ಬ್ಯೂಟಿ ಪಾರ್ಲರ್ ಅತಿಥಿ ಉಪನ್ಯಾಸಕಿ ಮಾದವಿ ಮನೋಹರ ರೈ ಉಪಸ್ಥಿತರಿದ್ದರು.
ಜೆಸಿಐ ಬೆಳ್ತಂಗಡಿಯ ಅಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ಸಭಾಧ್ಯಕ್ಷತೆ ವಹಿಸಿ ಸರ್ವರನ್ನು ಸ್ವಾಗತಿಸಿದರು. ಜೇಸಿ ಅದ್ವಿತಿ ಕೆ.ಎಸ್. ಜೇಸಿ ವಾಣಿ ಉದ್ಘೋಷಿಸಿದರು. ರಂಜನ್ ಗುಡಿಗಾರ್ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಜೆಸಿ ಭವ್ಯಶ್ರೀ ಕೀರ್ತಿರಾಜ್ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ರುಡ್‌ಸೆಟ್ ಸಂಸ್ಥೆಯ ಸಿಬ್ಬಂದಿಗಳು ಜೇಸಿ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ಕಾರ್ಯದರ್ಶಿ ಪ್ರಮೋದ್ ಕೆ. ವಂದಿಸಿದರು.