Site icon Suddi Belthangady

ಬೆಳ್ತಂಗಡಿ: ಸತ್ಯ ಶೋಧಕ ವೇದಿಕೆ- ಅಂಡರ್ ವಮ್೯ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

ಬೆಳ್ತಂಗಡಿ: ಸತ್ಯ ಶೋಧಕ ವೇದಿಕೆ ಆಶ್ರಯದಲ್ಲಿ ಸಮಾಜ ಪರಿವರ್ತನಾ ಚಿಂತಕರುಗಳಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಹಾಗೂ ಪೆರಿಯಾರ್ ರಾಮಸ್ವಾಮಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಎಲ್ಲಾ ಸಾರ್ವಜನಿಕರಿಗಾಗಿ 7 ಜನರ ಅಂಡರ್ ವಮ್೯ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವು ಸೆ. 21ರಂದು ಬೆಳಿಗ್ಗೆ 11 ಗಂಟೆಗೆ ಮಾಲಾಡಿಯ ಶ್ರೀ ರಾಮಾಂಜನೆಯ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.

ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ತಾಲೂಕು ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಅವರು ಉದ್ಘಾಟಿಸಿ ಒಂದೇ ಜಾತಿ, ಒಂದೇ ಕುಲ ಎಂದು ಸಾರಿದ ನಾರಾಯಣ ಗುರುಗಳ ಜನ್ಮ ಜಯಂತಿಯನ್ನು ಎಲ್ಲಾ ಜಾತಿಯವರನ್ನು ಒಟ್ಟು ಸೇರಿಸಿ ಈ ರೀತಿ ಯುವಕರಿಗೆ ಚಿಂತನೆಯನ್ನು ಮೂಡಿಸುವ ಸತ್ಯ ಶೋಧಕ ತಂಡದ ಯೋಜನೆ ಉತ್ತಮವಾದದು ಎಂದು ಶ್ಲಾಘಿಸಿದರು. ವೇದಿಕೆಯಲ್ಲಿ ಪಾರೆಂಕಿ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ರಮೇಶ್ ಮಡಂತ್ಯಾರ್, ಮಾಲಾಡಿಯ ಆಶಾ ಕಾರ್ಯಕರ್ತೆ ಸವಿತಾ ಸೀತಾರಾಮ ಪೂಜಾರಿ, ಗರ್ಡಾಡಿ ಪಡ್ತಿರೆ ಸತ್ಯ ಸಾರಮುಪ್ಪಣ್ಯ ಅಧ್ಯಕ್ಷ ರಂಜಿತ್ ಹೆಚ್., ಸತ್ಯ ಶ್ರೀ ಪ್ರೆಂಡ್ಸ್ ಅಧ್ಯಕ್ಷ ಪ್ರಸಾದ್ ಕುರ್ಲೊಟ್ಟು, ರೂಪ ಸೌಂಡ್ಸ್ ಲೈಟಿಂಗ್ಸ್ ನ ಮಾಲಕ ರೂಪೇಶ್ ಕೊಲ್ಪೆದಬೈಲು, ಸೋಣಂದೂರು ದ.ಕ.ಜಿ.ಪಂ.ಹಿ.ಪ್ರಾ ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯ ಮಂಜುನಾಥ ಅವರು ಉಪಸ್ಥಿತರಿದ್ದರು. ಸತ್ಯ ಶೋಧಕ ವೇದಿಕೆಯ ಅಧ್ಯಕ್ಷ ಸುಕೇಶ್ ಕೆ. ಮಾಲಾಡಿ, ಕ್ರೀಡಾಕೂಟದ ಉದ್ದೇಶದ ಬಗ್ಗೆ ಪ್ರಾಸ್ತಾವಿಕ ಮಾತುಗಳೊಂದಿಗೆ ವ್ಯಕ್ತಪಡಿಸುತ್ತಾ ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು. ಸುಶ್ಮೀತಾ ಮಾಲಾಡಿ ನಿರೂಪಿಸಿ, ಸತೀಶ್ ಉಜಿರೆ ಧನ್ಯವಾದವಿತ್ತರು.

Exit mobile version