ಬೆಳ್ತಂಗಡಿ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪೂರ್ವಾಭಾವಿ ಸಭೆ ಮತ್ತು ಕಾರ್ಯಕಾರಿ ಸಮಿತಿಯ ರಚನೆಯು ಸೆ.1ರಂದು ಮಂಗಳೂರಿನ ವೇಲೆನ್ಸಿಯಾದ ಸಭಾಂಗಣದಲ್ಲಿ ಜಿಲ್ಲಾ ಸಂಯೋಜಕರಾದ ಮ್ಯಾಥ್ಯೂ ಟಿ.ಜಿ. ಕಡಬ ಅವರ ಮುಂದಾಳುತ್ವದಲ್ಲಿ ನಡೆಯಿತು.
ಸಭೆಯಲ್ಲಿ ಜಿಲ್ಲಾ ಗೌರವಾಧ್ಯಕ್ಷರುಗಳಾಗಿ ಬೆಳ್ತಂಗಡಿಯ ಗೋಪಾಲಕೃಷ್ಣ ಕಾಂಚೋಡು ಹಾಗೂ ಬಂಟ್ವಾಳದ ದಾಸಪ್ಪ ಪೂಜಾರಿ, ಜಿಲ್ಲಾಧ್ಯಕ್ಷರಾಗಿ ಮಂಗಳೂರಿನ ನೋರ್ಬರ್ಟ್ ರೊಡ್ರಿಗಸ್, ಉಪಾಧ್ಯಕ್ಷರಾಗಿ ಮಂಗಳೂರಿನ ರುಡಾಲ್ಫ್ ಡಿಸೋಜ, ಪ್ರಧಾನ ಕಾರ್ಯದರ್ಶಿಯಾಗಿ ಕಡಬದ ಸೋಮಶೇಖರ ಎನ್., ಖಜಾಂಚಿಯಾಗಿ ಬೆಳ್ತಂಗಡಿಯ ಚಂದಪ್ಪ ಡಿ.ಎಸ್., ಜಂಟಿ ಖಜಾಂಚಿಯಾಗಿ ಮಂಗಳೂರಿನ ಅನಿಲ್ ಜಾನ್ ಅವರನ್ನು ಆಯ್ಕೆ ಮಾಡಲಾಯಿತು.
ಸಲಹಾ ಸಮಿತಿಗೆ ಸಬಾಸ್ಟಿನ್ ಕೆ.ಕೆ. ಕಡಬ, ಎ. ವೆಂಕಪ್ಪ ಗೌಡ ವಿಟ್ಲ, ತಂಗಚ್ಚನ್ ಬೆಳ್ತಂಗಡಿ, ಗೋಪಾಲ ಗೌಡ ಮಂಗಳೂರು ಹಾಗೂ ನಿರ್ದೇಶಕರ ಸಮಿತಿಗೆ ಸೈಮನ್ ಕೆ.ಸಿ. ಕಡಬ, ವಾಸುದೇವ ಗೌಡ ಕಡಬ, ಮೋನಪ್ಪ ಪೂಜಾರಿ ಬಂಟ್ವಾಳ, ಗಣೇಶ ಕಾಮತ್ ಮಂಗಳೂರು, ಸ್ಟೀಫನ್ ಕಡಬ ಮತ್ತು ಪುತ್ತೂರು ತಾಲೂಕು ಅಧ್ಯಕ್ಷರಾಗಿ ಗೋಪಾಲ್ ಗೌಡ ಅವರನ್ನು ಆರಿಸಲಾಯಿತು.