Site icon Suddi Belthangady

ಮೂಡಬಿದಿರೆ: ಎಕ್ಸಲೆಂಟ್ ಸಂಸ್ಥೆಯಲ್ಲಿ ನವರಾತ್ರಿ ನವಶಕ್ತಿ ಸನ್ಮಾನ ಕಾರ್ಯಕ್ರಮ

ಬೆಳ್ತಂಗಡಿ: ಮೂಡಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ನವರಾತ್ರಿಯ ಪ್ರಯುಕ್ತ ನವರಾತ್ರಿ – ನವಶಕ್ತಿ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಮಹಿಳಾ ಸ್ವಾವಲಂಬನೆ ಸಮಾಜದ ಪ್ರಗತಿಯ ಮೂಲವಾಗಿದೆ, ಹೆಣ್ಣುಮಕ್ಕಳಿಗೆ ಕನಸು ಕಾಣಲು ಹಕ್ಕು ಇದೆ ಸಾಧಿಸಲು ಶಕ್ತಿ ಇದೆ ಎಂದರು ಜೊತೆಗೆ ಎಕ್ಸಲೆಂಟ್ ಸಂಸ್ಥೆಯ ಸ್ವಚ್ಛ ಪರಿಸರವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಮೂಡುಬಿದಿರೆ ಪುರಸಭೆ ಮುಖ್ಯ ಅಧಿಕಾರಿ ಇಂದು ಎಂ. ಅವರು ಪ್ರಶಂಸಿಸಿದರು.

ಈ ಕಾರ್ಯಕ್ರಮವು ನವರಾತ್ರಿಯ ಆಧ್ಯಾತ್ಮಿಕತೆಯ ಜೊತೆಗೆ ಹೆಣ್ಣಿನ ಮಹತ್ವವನ್ನು ಬಿಂಬಿಸುತ್ತದೆ. ಹೆಣ್ಣು ತನ್ನ ಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತಾಳೆ. ನವರಾತ್ರಿಯು ಹೆಣ್ಣಿನ ಶಕ್ತಿಯ ಪ್ರತೀಕ ಎಂದು ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀಮತಿ ರಶ್ಮಿತಾ ಜೈನ್ ಅವರು ಮಾತನಾಡಿ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು.

ನಕಾರಾತ್ಮಕತೆಯನ್ನು ನವಶಕ್ತಿಗಳು ಸಕಾರಾತ್ಮಕತೆಯನ್ನಾಗಿ ಪರಿವರ್ತಿಸಲಿ ಎಂದು ನವಶಕ್ತಿಯ ಮಹತ್ವವನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಯುವರಾಜ್ ಜೈನ್ ಅವರು ತಿಳಿಸಿದರು. ಶಾರದಾದೇವಿಗೆ ಪುಷ್ಪ ಅರ್ಪಿಸಿ, ದೀಪವನ್ನು ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಅತಿಥಿಯಾಗಿ ಆಗಮಿಸಿದ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅವರ ತಾಯಿ ಪದ್ಮಾವತಿ ಅಮ್ಮ ಅವರನ್ನು ವಿಶೇಷವಾಗಿ ಗೌರವ ಪೂರ್ವಕವಾಗಿ ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಹಾಗೂ ನವಶಕ್ತಿ ಸ್ವರೂಪದ ನವನಾರಿಯರಾದ ಅಮರಾಜಿ, ಸುಮಿತ್ರಾ, ಚಂದನಾ, ದೀಪಾ ಉಮೇಶ್ ರಾವ್, ಅನಿತಾ ಸಿಕ್ವೇರಾ, ಸೌಮ್ಯ ಕುಲದೀಪ್, ದಿವ್ಯಾ ಪಡಿವಾಳ್, ರೇಷ್ಮಾ ವರ್ಮಾ ಹಾಗೂ ಪ್ರಿಯಾ ಕ್ವಿನಿ ರೋಡ್ರಿಗಸ್ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಿತಗೊಂಡ ದೀಪಾ ಉಮೇಶ್ ರಾವ್ ಹಾಗೂ ಪ್ರಿಯಾ ಕ್ವಿನಿ ರೋಡ್ರಿಗಸ್ ಕಾರ್ಯಕ್ರಮದ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು. ಎಕ್ಸಲೆಂಟ್ ಸಿ.ಬಿ.ಎಸ್.ಇ ಶಾಲೆಯ ಪ್ರಾಂಶುಪಾಲ ಪ್ರಸಾದ್, ಅಪೇಕ್ಷ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನೆರವೇರಿಸಿಕೊಟ್ಟರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಅರ್ಚನಾ ಹಾಗೂ ಸ್ವಾತಿಯ ಅವರು ನೆರವೇರಿಸಿ ಎಕ್ಸಲೆಂಟ್ ಸಿ.ಬಿ.ಎಸ್‌.ಇ ಶಾಲೆಯ ಪ್ರಾಂಶುಪಾಲ ಪ್ರಸಾದ್ ಅವರು ವಂದಿಸಿದರು.

Exit mobile version