Site icon Suddi Belthangady

ಶ್ರೀ ಕ್ಷೇತ್ರ ಗೆಜ್ಜೆಗಿರಿ ನವರಾತ್ರಿ ಉತ್ಸವ, ಭಜನಾ ಸಂಕೀರ್ತನೆ ಉದ್ಘಾಟನೆ

ಬೆಳ್ತಂಗಡಿ: ಆದಿ ದೈವ ಧೂಮಾವತಿ, ದೇಯಿ ಬೈದೇತಿ ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಭಜನಾ ಸಂಕೀರ್ತನೆ ಮತ್ತು ನವರಾತ್ರಿ ಉತ್ಸವ ವಿಜೃಂಭಣೆಯಿಂದ ಉಪ್ಪಿನಂಗಡಿಯ ಉದ್ಯಮಿ ಎಮ್. ವರದರಾಜ್ ದೀಪ ಬೆಳಗಿಸುವ ಮುಖಾಂತರ ಪ್ರಾರಂಭಗೊಂಡಿತು.

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ, ಜಯಂತ ನಡುಬೈಲು, ಶ್ರೀಧರ ಪೂಜಾರಿ, ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ, ಮೋಹನ್ ದಾಸ್ ಬಂಗೇರ, ಉಲ್ಲಾಸ್ ಕೋಟ್ಯಾನ್, ಹೇಮಲತಾ ರಘು ಸಾಲಿಯಾನ್, ನಿತೀಶ್ ಕುಮಾರ್ ಶಾಂತಿವನ, ನಾರಾಯಣ ಕುರಿಕಾರ, ಆರ್.ಸಿ. ನಾರಾಯಣ, ಆದಿಶಕ್ತಿ ಭಜನಾ ಮಂಡಳಿ ಪಟ್ಟೆಯ ರೇಖ ನಾಗರಾಜ್, ಶಾಲಿನಿ ರವಿ ಪೂಜಾರಿ, ಜನಾರ್ದನ ಪೂಜಾರಿ ನೂಜಾ, ಮುಂತಾದ ಗಣ್ಯರು ಹಾಜರಿದ್ದರು.

9 ದಿನಗಳ ಕಾಲ ನಿರಂತರ ನಡೆಯುವ ನವರಾತ್ರಿ ಉತ್ಸವದಲ್ಲಿ ಸರ್ವ ಶಕ್ತಿಗಳಿಗೆ ವಿಶೇಷ ಅಲಂಕಾರ, ಅವಳಿ ಮಕ್ಕಳಿಗೆ ಅಕ್ಷರಾಭ್ಯಾಸ, ಅನ್ನಪ್ರಸಾದ ಸೇವೆ, ವಾಹನ ಪೂಜೆ, ಮುಂತಾದ ವಿಶೇಷ ಕಾರ್ಯಕ್ರಮಗಳು ಜರಗಲಿರುವುದು ಎಂದು ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಡಾ. ಕೆಬಿ ರಾಜಾರಾಮ್ ಸ್ವಾಗತಿಸಿ, ವಂದನಾರ್ಪಣೆ ಸಲ್ಲಿಸಿದರು.

Exit mobile version