Site icon Suddi Belthangady

ವಿಮುಕ್ತಿ ಸಂಸ್ಥೆಯಿಂದ ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನ

ಬೆಳ್ತಂಗಡಿ: ವಿಮುಕ್ತಿ ಸ್ವ ಸಹಾಯ ಸಂಘಗಳ ಟ್ರಸ್ಟ್ ಕಪುಚಿನ್ ಕೃಷಿಕ ಸೇವಾ ಕೇಂದ್ರ, ಶ್ಯಾಲ ಅವರು ಆಗಸ್ಟ್ ಹಾಗೂ ಸಪ್ಟೆಂಬರ್ ತಿಂಗಳಿನಲ್ಲಿ ತಾಲೂಕಿನ ಗರ್ಡಾಡಿ, ಪೆರ್ಲಬೈಪಾಡಿ ಮತ್ತು ಪೆರ್ಲ – ಉಜಿರೆ ಅಂಗನವಾಡಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಿ ಶಾಲೆಗೆ ಉಪಯುಕ್ತವಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಯಿತು.

ಗರ್ಡಾಡಿಯ ಮುಗಿನಡ್ಕ ಅಂಗನವಾಡಿಯಲ್ಲಿ ವಿಮುಕ್ತಿ ಸ್ವ ಸಹಾಯ ಸಂಘ – ಗರ್ಡಾಡಿ ಘಟಕದಿಂದ ಅಂಗನವಾಡಿಯ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಿ ನಂತರ ಟಿಪಾಯ್ ಯನ್ನು ಉಡುಗೊರೆಯಾಗಿ ನೀಡಲಾಯಿತು.

ಅಲ್ಲಿಗೆ ಆಗಮಿಸಿದ್ದ ಪಡಂಗಡಿ ಪಿಡಿಒ ಅವರು ವಿಮುಕ್ತಿ ಸಂಸ್ಥೆಯನ್ನು ಶ್ಲಾಘಿಸಿದರು. ಹಾಗೆಯೇ ಪೆರ್ಲ ಬೈಪಾಡಿ ‌ಘಟಕದಿಂದ ಅಲ್ಲಿನ ಅಂಗನವಾಡಿಯಲ್ಲಿ ವಿಮುಕ್ತಿ ಸಂಘದ ಮಹಿಳೆಯರು ಶ್ರಮದಾನ ಮಾಡಿ ಪುಸ್ತಕ ಜೋಡಿಸುವ ರ‍್ಯಾಕ್ ನ್ನು ಉಡುಗೊರೆಯಾಗಿ ನೀಡಿದರು. ಹಾಗೂ ಪೆರ್ಲ ಘಟಕದ ಮಹಿಳೆಯರು ಸೇರಿ ಅಲ್ಲಿನ ಅಂಗನವಾಡಿಗೆ ಪುಸ್ತಕ ಜೋಡಿಸುವ ರ‍್ಯಾಕ್ ನ್ನು ಉಡುಗೊರೆಯಾಗಿ ನೀಡಿದರು. ಬಾಲ ವಿಕಾಸ ಸಮಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಪೋಷಕರು ಹಾಜರಿದ್ದರು.

Exit mobile version