Site icon Suddi Belthangady

ಬೆಳ್ತಂಗಡಿ: ವಲಯ ಕಥೋಲಿಕ್ ಸಭಾದಿಂದ ಭಾಷಣ ಕೌಶಲ್ಯ ಬಗ್ಗೆ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ: ವಲಯದ ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ ಮೇಲ್ ಉಸ್ತುವಾರಿಯಲ್ಲಿ ಮಕ್ಕಳಿಗೆ ಭಾಷಣ ಸ್ಪರ್ಧೆಯ ತರಬೇತಿ ಬೆಳ್ತಂಗಡಿ ಚರ್ಚಿನ ಹೋಲಿ ರಿಡೀಮರ್ ಆಡಿಟೋರಿಯಂ ಸಭಾಂಗಣದಲ್ಲಿ ಸೆ. 21ರಂದು ನಡೆಯಿತು.

ಬೆಳ್ತಂಗಡಿ ಚರ್ಚಿನ ಧರ್ಮ ಗುರು ಫಾದರ್ ವಾಲ್ಡರ್ ಡಿ ಮಿಲ್ಲೋ ಅವರು ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಥೊಲಿಕ್ ಸಭಾ ಬೆಳ್ತಂಗಡಿ ವಲಯದ ಅಧ್ಯಕ್ಷ ಶ್ರೀಮಾನ್ ಅಲ್ಬರ್ಟ್ ಸುನಿಲ್ ಮೋನಿಸ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದವರನ್ನು ಸ್ವಾಗತಿಸಿ, ಹೂಗುಚ್ಚ ನೀಡಿ ಗೌರವಿಸಿದರು. ಈ ಭಾಷಣ ತರಬೇತಿಯ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾನಿಲಯದ ವಿದ್ವಾಂಸರು ಮ್ಯುರಲ್ ಹೆನ್ರಿಟಾ ಕುಟಿನ್ಹಾ, ಕೇಂದ್ರಿಯ ರಾಜಕೀಯ ಸಂಚಾಲಕ ಶ್ರೀಮಾನ್ ಸ್ಟ್ಯಾನಿ ಲೋಬೊ, ಕಥೋಲಿಕ್ ಸಭಾ ಬೆಳ್ತಂಗಡಿ ವಲಯದ ಅಧ್ಯಕ್ಷ ಆಲ್ಬರ್ಟ್ ಸುನಿಲ್ ಮೋನಿಸ್,
ವಲಯ ಕಾರ್ಯದರ್ಶಿ ಸ್ಟೇನಿ ಪಿಂಟೊ, ಬೆಳ್ತಂಗಡಿ ಕಥೋಲಿಕ್ ಸಭಾ ಘಟಕದ ಅಧ್ಯಕ್ಷ ಗಿಲ್ಬರ್ಟ್ ಪಿಂಟೋ, ವಲಯದ ಭಾಷಣ ಸ್ಪರ್ಧೆಯ ಸಂಚಾಲಕ ಡೆನಿಯಲ್ ಕ್ರಾಸ್ತಾ ವೇದಿಕೆಯಲ್ಲಿ ಹಾಜರಿದ್ದರು.

ಐರಿನ್ ಸಿಕ್ವೇರಾ ಸಂಪನ್ಮೂಳ ವ್ಯಕ್ತಿಯವರ ಪರಿಚಯವನ್ನು ಮಾಡಿದರು. ಬೆಳ್ತಂಗಡಿ ವಲಯದ ನಿರ್ದೆಶಕ ಪಾದರ್ ವಾಲ್ಟರ್ ಡಿ ಮೆಲ್ಲೊ ಅವರು ಮಕ್ಕಳಿಗೆ ಉತ್ತಮ ಸಂದೇಶಕೊಟ್ಟರು. ಬೆಳ್ತಂಗಡಿ ಚರ್ಚಿನ ಉಪಾಧ್ಯಕ್ಷ ವಾಲ್ಟರ್ ಮೋನಿಸ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಭಾಷಣ ತರಬೇತಿಯ ಕಾರ್ಯಕ್ರಮಕ್ಕೆ ಸುಮಾರು 270 ಮಕ್ಕಳು ಭಾಗವಹಿಸಿದ್ದರು. ಇದರಲ್ಲಿ ಮಡಂತ್ಯಾರಿನ ಮಕ್ಕಳು ಅತೀ ಹೆಚ್ಚು ಭಾಗವಹಿಸಿದ್ದರಿಂದ ಮಡಂತ್ಯಾರಿನ ಘಟಕದ ಅಧ್ಯಕ್ಷ ಶ್ರೀಮಾನ್ ವಿನ್ಸೆoಟ್ ಡಿಸೋಜಾ ಹಾಗೂ ಕೇಂದ್ರಿಯ ಕಮಿಟಿಯ ಉಪಾಧ್ಯಕ್ಷ ಶ್ರೀಮಾನ್ ಲಿಯೋ ರೋಡ್ರಿಗಸ್ ಅವರನ್ನು ಗೌರವಿಸಲಾಯಿತು. ವಲಯದ ಭಾಷಣ ಸ್ಪರ್ಧೆಯ ಸಂಚಾಲಕರು ಧನ್ಯವಾದವನ್ನು ಆರ್ಪಿಸಿದರು.

Exit mobile version