Site icon Suddi Belthangady

ಬುರುಡೆ ಪ್ರಕರಣ-ಚಿನ್ನಯ್ಯ ಖಾತೆಗೆ ಹಣ ವರ್ಗಾವಣೆ ಹಿನ್ನಲೆ-11ಜನರಿಗೆ ನೋಟಿಸ್ -ತಿಮರೋಡಿ ಆಪ್ತ ಗಣೇಶ್ ಶೆಟ್ಟಿ ವಿಚಾರಣೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣದಲ್ಲಿ ಹಣ ಫಂಡಿಂಗ್ ಆಗಿರುವ ಆರೋಪದಡಿ ಹಲವರ ವಿಚಾರಣೆ ನಡೆಯುತ್ತಿದೆ. ಆರೋಪಿ ಚಿನ್ನಯ್ಯನಿಗೆ ಫಂಡಿಂಗ್ ಮಾಡಿರುವ ಆರೋಪದಡಿ ಹಲವರ ಬೆನ್ನು ಬಿದ್ದ ಎಸ್.ಐ.ಟಿ ತೀವ್ರ ತನಿಖೆ ನಡೆಸುತ್ತಿದೆ.

ಚಿನ್ನಯ್ಯನ ಹಾಗು ಪತ್ನಿಯ ಅಕೌಂಟ್ ಗೆ ಹಣ ವರ್ಗಾವಣೆ ಬಗ್ಗೆ ಮಹತ್ವದ ದಾಖಲೆ ಸಂಗ್ರಹಿಸಿರುವ ಬಗ್ಗೆ ಮಾಹಿತಿ ಲಭ್ತವಾಗಿದೆ‌ಚಿನ್ನಯ್ಯನ ಕುಟುಂಬದ ಪ್ರತಿಯೊಬ್ಬರ ಖಾತೆ ಯ ಡಿಟೇಲ್ ಪಡೆದು ಎಸ್.ಐ.ಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಫಂಡಿಂಗ್ ಮಾಡಿರುವ ಆರೋಪದ ಮೇಲೆ 11 ಜನರಿಗೆ ಎಸ್.ಐ.ಟಿ ನೋಟೀಸ್ ನೀಡಿದೆ.ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರು ಸೇರಿದಂತೆ 11 ಜನರಿಗೆ ನೋಟಿಸ್ ನೀಡಿರುವ ಮಾಹಿತಿ ಲಭ್ಯವಾಗಿದ್ದು, ಈಗಾಗಲೇ 6 ಜನರನ್ನು ವಿಚಾರಣೆ ನಡೆಸಿದ್ದಾರೆ. ತಿಮರೋಡಿ ಆಪ್ತ ಗಣೇಶ್ ಶೆಟ್ಟಿ ಎಂಬಾತನ ವಿಚಾರಣೆಯನ್ನು ಎಸ್.ಐ.ಟಿ ನಡೆಸುತ್ತಿದೆ.

Exit mobile version