Site icon Suddi Belthangady

ಪುಂಜಾಲಕಟ್ಟೆಯಲ್ಲಿ ಸ್ಕೂಟಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಯ ಬೊಲೆರೋ ಡಿಕ್ಕಿ-ಸವಾರನಿಗೆ ಗಂಭೀರ ಗಾಯ

ಪುಂಜಾಲಕಟ್ಟೆ: ಸಮೀಪದ ತಿರುವಿನಲ್ಲಿ ಸ್ಕೂಟಿ ಮತ್ತು ಪೊಲೀಸ್ ವಾಹನದ ನಡುವೆ ಸೆ.23ರಂದು ಅಪಘಾತ ಸಂಭವಿಸಿದೆ. ಧರ್ಮಸ್ಥಳ ಠಾಣೆಯ ಬೊಲೆರೋ ಮಂಗಳೂರು ಕಡೆಗೆ ತೆರಳುತ್ತಿದ್ದು, ಪುಂಜಾಲಕಟ್ಟೆ ಕಡೆಗೆ ಬರುತ್ತಿದ್ದ 19ವರ್ಷದ ಯುವಕ ಹರ್ಷಿತ್ ನ ಸ್ಕೂಟಿಯ ನಡುವೆ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿರುವ ಬಂಟ್ವಾಳದ ಪಿಲಾತಬೆಟ್ಟು ಗ್ರಾಮದ ಯುವಕನನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಯುವಕ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

Exit mobile version