Site icon Suddi Belthangady

ಕಕ್ಯಪದವು: ಎಲ್. ಸಿ. ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ಫಲಿತಾಂಶ

ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಮೆಮೋರಿಯಲ್ ಎಜುಕೇಷನಲ್ ಟ್ರಸ್ಟ್ ನಿಂದ ನಡೆಸಲ್ಪಡುವ ಕಕ್ಯಪದವು ಎಲ್. ಸಿ. ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಪದವಿ ವಿಭಾಗದ ಬಿ.ಕಾಂ. ದ್ವಿತೀಯ ಹಾಗೂ ನಾಲ್ಕನೇ ಚತುರ್ಮಾಸದಲ್ಲಿ ಉತ್ತಮವಾದ ಫಲಿತಾಂಶ ದಾಖಲಾಗಿದ್ದು, ನಾಲ್ಕನೇ ಚತುರ್ಮಾಸದಲ್ಲಿ ವಿದ್ಯಾರ್ಥಿನಿ ಸುಪ್ರಿಯಾ 94% ಫಲಿತಾಂಶವನ್ನು ಪಡೆದು ಬ್ಯುಸಿನೆಸ್ ರೆಗ್ಯುಲೇಟರಿ ಫ್ರೇಮ್ವರ್ಕ್ ವಿಷಯದಲ್ಲಿ 100ಕ್ಕೆ 100ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.

ವಿದ್ಯಾರ್ಥಿನಿ ಫಾತಿಮಾ 92% ಫಲಿತಾಂಶವನ್ನು ಪಡೆದು ಬ್ಯುಸಿನೆಸ್ ರೆಗ್ಯುಲೇಟರಿ ಫ್ರೇಮ್ವರ್ಕ್ ಹಾಗೂ ಕಾಸ್ಟ್ & ಮ್ಯಾನೇಜ್ಮೆಂಟ್ ಅಕೌಂಟಿಂಗ್ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ವಿದ್ಯಾರ್ಥಿನಿ ಸುರಕ್ಷಾ 91% ಫಲಿತಾಂಶವನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಹಾಗೆಯೇ ಎರಡನೇ ಚತುರ್ಮಾಸದಲ್ಲಿ ವಿದ್ಯಾರ್ಥಿನಿ ಫಾತಿಮಾ ಅಜ್ಮಿಯ 83% ಫಲಿತಾಂಶವನ್ನು ಪಡೆದು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ . ವಿದ್ಯಾರ್ಥಿನಿ ಆಯಿಷಾತ್ ನುಶ್ರಾ 82% ಅಂಕ ಪಡೆದು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ವಿದ್ಯಾರ್ಥಿನಿ ಬಿ. ಆಯಿಶಾತುಲ್ ರಾಫಿಯ 80% ಅಂಕ ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತಮವಾದ ಫಲಿತಾಂಶ ದಾಖಲಿಸಿರುವುದು ಹೆಮ್ಮೆಯ ವಿಚಾರ. ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಂಯೋಜಕರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ .

Exit mobile version