ಬೆಳಾಲು: ಮಾಯ ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿಯಿಂದ ಪ್ರತಿ ವರ್ಷದಂತೆ ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುತ್ತಿರುವ 43ನೇ ವರ್ಷದ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ ಸೆ. 22ರಂದು ಶ್ರೀ ಮಾಯ ಮಹಾದೇವ ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್. ಪದ್ಮ ಗೌಡ ಬಿಡುಗಡೆ ಗೊಳಿಸಿದರು. ದೇವಸ್ಥಾನದ ಅರ್ಚಕ ಕೇಶವರಾಮಯಾಜಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುರೇಶ್ ಭಟ್, ದಾಮೋದರ ಗೌಡ ಸುರುಳಿ, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ದೇವಸ್ಥಾನದ ಮೆನೇಜರ್ ಶೇಖರ ಗೌಡ, ಭಜನಾ ಮಂಡಳಿಯ ಅಧ್ಯಕ್ಷ ಹರೀಶ್ ಆಚಾರ್ಯ, ಕಾರ್ಯದರ್ಶಿ ಶಿವ ಪ್ರಸಾದ್, ಪದಾಧಿಕಾರಿಗಳಾದ ನಾರಾಯಣ ಮಡಿವಾಳ, ಶಶಿಧರ ಕೆ., ಮೋನಪ್ಪ ಗೌಡ, ಉಷಾದೇವಿ ಕಿಣ್ಯಾಜೆ, ರಂಜನ್, ಓಡಿಯಪ್ಪ ಎಂ. ಕೆ. ಮೊದಲಾದವರು ಹಾಜರಿದ್ದರು.