ನಿಡ್ಲೆ: ಕರ್ನಾಟಕ ಸರ್ಕಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿ ಹಾಗೂ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ಕಾಯರ್ತಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರಾಥಮಿಕ /ಪ್ರೌಢಶಾಲಾ ಬಾಲಕ /ಬಾಲಕಿಯರ “ಫುಟ್ಬಾಲ್ ಪಂದ್ಯಾಟ” ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ನೇತೃತ್ವದಲ್ಲಿ ನಿಡ್ಲೆ ಸರಕಾರಿ ಪ್ರೌಢ ಶಾಲೆ ಮೈದಾನದಲ್ಲಿ ಸೆ.20ರಂದು ನಡೆಯಿತು.
ಫುಟ್ಬಾಲ್ ಪಂದ್ಯಾಟದ ಉದ್ಘಾಟನೆಯನ್ನು ಸಮೂಹ ಶಿಕ್ಷಣ ಸಂಸ್ಥೆಗಳ ರೀಜನಲ್ ಸುಪೀರಿಯರ್ ಆಗಿರುವ ಸಿಸ್ಟರ್ ಲಿಸ್ ಮ್ಯಾಥ್ಯೂ ಅವರು ಉದ್ಘಾಟಿಸಿದರು. ಸಭಾ ಅಧ್ಯಕ್ಷತೆಯನ್ನು ಸೇಂಟ್ ಸಬಾಸ್ಟಿಯನ್ ಚರ್ಚ್ ಕಳೆಂಜದ ಧರ್ಮ ಗುರು ರೆವರೆಂಡ್ ಫಾದರ್ ಸುನಿಲ್ ಪೂವತಿಂಗಲ್ ಅವರು ವಹಿಸಿದ್ದರು.
ಸಮಾರಂಭದಲ್ಲಿ ಬೆಳ್ತಂಗಡಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಪರಿವೀಕ್ಷಣಾಧಿಕಾರಿಗಳಾದ ಸುಜಯ, ಬೆಳ್ತಂಗಡಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ನೋಡೆಲ್ ಅಧಿಕಾರಿ ಸವಿತಾ ವಿಠಲ, ಸೇಕ್ರೆಟ್ ಹಾರ್ಟ್ ಶಿಕ್ಷಣ ಸಂಸ್ಥೆಗಳ ಎಜುಕೇಶನಲ್ ಕೌನ್ಸಿಲರ್ ರೋಸ್ನ, ನಿಡ್ಲೆ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶಾಂತ ಶೆಟ್ಟಿ, ದಿವ್ಯ ಜ್ಯೋತಿ ಶಾಲೆಯ ಮುಖ್ಯ ಶಿಕ್ಷಕಿ ಲಿಸ್ನ ಮ್ಯಾಥ್ಯೂ, ಶಾಲಾ ಸಂಚಾಲಕಿ ಟೆಸ್ಸಿ ಅಗಸ್ಟಿನ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಜೈಸನ್ ವರ್ನೂರ್, ನಿಡ್ಲೆ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ರಾಜಗುರು ಹೆಬ್ಬಾರ್ ಸಭೆಯಲ್ಲಿ ಉಪಸ್ಥಿತರಿದ್ದರು.
ವಿಜೇತರ ವಿವರ: ಪ್ರಾಥಮಿಕ ಶಾಲಾ ಹುಡುಗರ ವಿಭಾಗದಲ್ಲಿ ಬೆಳ್ತಂಗಡಿ ಎಸ್. ಡಿ. ಎಂ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಮಂಜೊಟ್ಟಿ ಸ್ಟಾರ್ ಲೈನ್ ದ್ವಿತೀಯ ಸ್ಥಾನ ಗಳಿಸಿಕೊಂಡಿದ್ದಾರೆ.
ಹುಡುಗಿಯರ ವಿಭಾಗದಲ್ಲಿ ಕಾಯರ್ತಡ್ಕ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನ ಹಾಗೂ ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನ ಗಳಿಸಿಕೊಂಡಿರುತ್ತಾರೆ.
ಪ್ರೌಢ ಶಾಲಾ ಹುಡುಗರ ವಿಭಾಗದಲ್ಲಿ ಉಜಿರೆ ಎಸ್.ಡಿ.ಎಂ ಸೆಕೆಂಡರಿ ಶಾಲೆ ಪ್ರಥಮ ಸ್ಥಾನ ಹಾಗೂ ಬೆಳ್ತಂಗಡಿ ಎಸ್. ಡಿ. ಎಂ ಪ್ರೌಢಶಾಲೆ ದ್ವಿತೀಯ ಸ್ಥಾನ ಗಳಿಸಿಕೊಂಡಿರುತ್ತದೆ.
ಪ್ರೌಢ ಶಾಲಾ ಹುಡುಗಿಯರ ವಿಭಾಗದಲ್ಲಿ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಪ್ರಥಮ, ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನ ಗಳಿಸಿಕೊಂಡಿರುತ್ತಾರೆ.
ಸಮಾರೋಪ ಸಮಾರಂಭದಲ್ಲಿ ನಿಡ್ಲೆ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶಾಂತ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಡಾ. ಕುಶಾಲಪ್ಪ ಮುಖ್ಯ ಅತಿಥಿಯಾಗಿದ್ದರು.
ವೇದಿಕೆಯಲ್ಲಿ ದಿವ್ಯಜೋತಿ ಶಾಲಾ ಮುಖ್ಯ ಶಿಕ್ಷಕಿ ಲಿಸ್ನಾ ಮ್ಯಾಥ್ಯೂ, ಕಾಯರ್ತಡ್ಕ ಸಿ.ಕೆ ರಬ್ವರ್ಸ್ ನ ಮಾಲೀಕ ಟೋಮಿ ಕೆಜಕಿಲ್, ಡೈಮಂಡ್ ಅರ್ಥ್ ಮೂವರ್ಸ್ ನ ಮಾಲೀಕ ಜಿಬಿನ್, ಸಿರಿಯನ್ ಕ್ಯಾಥೋಲಿಕ್ ಬ್ಯಾಂಕ್ ಬೆಳ್ತಂಗಡಿ ಶಾಖೆಯ ನಿರ್ದೇಶಕ ಜೈಸನ್, ಕಾಯರ್ತಡ್ಕ ಅಭಿಲಾಶ್ ಸೌಂಡ್ಸ್ ನ ಮಾಲೀಕ ತಂಗಚ್ಚನ್, ರಕ್ಷಕ ಶಿಕ್ಷಕ ಸಂಘದ ಮಾಜಿ ಅಧ್ಯಕ್ಷ ಮನೋಜ್, ಉಪಾಧ್ಯಕ್ಷೆ ಧನ್ಯ, ನಿಡ್ಲೆ ಸರಕಾರಿ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ರಾಜಗುರು ಹೆಬ್ಬಾರ್, ಪರಿವೀಕ್ಷಣಾಧಿಕಾರಿಗಳಾದ ಸುಜಯ ಹಾಗೂ ನೋಡಲ್ ಅಧಿಕಾರಿಯಾದ ವಿಠಲ್ ಮುಂತಾದವರು ಉಪಸ್ಥಿತರಿದ್ದರು.