Site icon Suddi Belthangady

ಸುಲ್ಕೇರಿ: ಚೈತನ್ಯ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

ಸುಲ್ಕೇರಿ: ಚೈತನ್ಯ ಸಂಜೀವಿನಿ ಮಹಿಳಾ ಒಕ್ಕೂಟದ 2024-2025ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಸೆ. 20ರಂದು ಒಕ್ಕೂಟದ ಅಧ್ಯಕ್ಷೆ ಪುಷ್ಪಲತ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಸುಪ್ರಿಯಾ ಅವರ ಪ್ರಾರ್ಥನೆಯೊಂದಿಗೆ ಸಭೆಯನ್ನು ಪ್ರಾರಂಭಿಸಿ ಕೃಷಿ ಸಖಿ ಶ್ವೇತಾ ಬಂದಂತಹ ಎಲ್ಲರನ್ನು ಸ್ವಾಗತಿಸಿ, ಪಂಚಾಯತ್ ಅಧ್ಯಕ್ಷರು ಸದಸ್ಯರು, ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ವೇದಿಕೆಯಲ್ಲಿ ಆಸೀನರಾಗಿದ್ದು ಪಂಚಾಯತ್ ಹಾಗೂ ಒಕ್ಕೂಟದ ಅಧ್ಯಕ್ಷೆ ದೀಪ ಪ್ರಜ್ವಲಿಸಿದರು.

ವಲಯ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ಅವರು ಸಂಜೀವಿನಿ ಯೋಜನೆಯ ಧ್ಯೇಯದ್ದೋಶಗಳ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.

ಪಶುಸಖಿ ತುಳಸಿ ವಾರ್ಷಿಕ ವರದಿಯನ್ನು MBK ವಿನುತ ಅವರು ಶಾಸನಬದ್ಧ ಲೆಕ್ಕಪರಿಶೋಧನ ವರದಿಯನ್ನು ಮಂಡಿಸಿದರು. ಮಂಡಿಸಿದ ವರದಿಯ ಬಗ್ಗೆ ಸಂಜೀವಿನಿ ಚಪ್ಪಾಳೆಯೊಂದಿಗೆ ಅನುಮೋದನೆ ಪಡೆಯಲಾಯಿತು.

ಸಭೆಯಲ್ಲಿ ಶಿವಶ್ರಿ ಸಂಜೀವಿನಿ, ಸ್ಫೂರ್ತಿ ಸಂಜೀವಿನಿ ಹಾಗೂ ರಜತ ಶ್ರೀ ಸಂಜೀವಿನಿ ಎಂಬ 3ಹೊಸ ಸಂಘಗಳ ಉದ್ಧಾಟನೆಯನ್ನು ಮಾಡಲಾಯಿತು. ಸಭೆಯಲ್ಲಿ ಸಂಜೀವಿನಿಯ ದ್ಯೇಯ ಗೀತೆಯನ್ನು ಹಾಡಲಾಯಿತು. ಸಭೆಯಲ್ಲಿ ಸ್ವಸ್ತಿಕ್ ಅವರು ಮಾದಕ ಮುಕ್ತ ಕರ್ನಾಟಕ ಪ್ರತಿಜ್ಞಾ ವಿಧಿಯನ್ನು ವಾಚಿಸಿದರು.

MBK ವಿನುತ ಅವರು ಕಾರ್ಯಕ್ರಮವನ್ನು ನಿರೂಪಿಸಿ,, LCRP ಯಶೋಧ ಅವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.

Exit mobile version