ಉಜಿರೆ: ಗ್ರಾಮ ಪಂಚಾಯತ್ ಮಟ್ಟದ ಪ್ರೇರಣ ಮಹಿಳಾ ಸಂಜೀವಿನಿ ಒಕ್ಕೂಟದ ಮಹಾಸಭೆಯು ಸೆ.20ರಂದು ಒಕ್ಕೂಟದ ಅಧ್ಯಕ್ಷೆ ವಿನುತಾ ರಜತ್ ಗೌಡ ಅವರ ಅಧ್ಯಕ್ಷತೆಯಲ್ಲಿ ಉಜಿರೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು
ಒಕ್ಕೂಟದ ಪದಾಧಿಕಾರಿ ಸುನಂದ ಇವರ ಪ್ರಾರ್ಥನೆಯೊಂದಿಗೆ ಸಭೆಯನ್ನು ಆರಂಭಿಸಲಾಯಿತು. ಕಾರ್ಯಕ್ರಮವನ್ನು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಶಾಕಿರಣ ಕಾರಂತ್ ಉದ್ಘಾಟಿಸಿ ಸಂಜೀವಿನಿ ಒಕ್ಕೂಟ ಮತ್ತು ಗ್ರಾಮ ಪಂಚಾಯತ್ ನ ಒಗ್ಗಟ್ಟಿನಲ್ಲಿ ಗ್ರಾಮದ ಅಭಿವೃದ್ಧಿ ಸಾಧ್ಯವೆಂದು ಒಕ್ಕೂಟದ ಕಾರ್ಯನಿರ್ವಹಣೆಯನ್ನು ಶ್ಲಾಘಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಾರ್ಷಿಕ ವರದಿ ಮಂಡನೆಯನ್ನು ಎಂ.ಬಿ.ಕೆ ಸುಜಾತ ಅವರು ಮಂಡಿಸಿದರು. L. C. R. P ಚಿತ್ರ ಅವರು ಶಾಸನಬದ್ಧ ಲೆಕ್ಕಪರಿಶೋಧನ ವರದಿಯನ್ನು ಮಂಡಿಸಿದರು. ಸಂಜೀವಿನಿ ಚಪ್ಪಾಳೆ ಯೊಂದಿಗೆ ಸರ್ವಾನುಮತದಿಂದ ಈ ವರದಿ ಮಂಡನೆಯನ್ನು ಅನುಮೋದಿಸಲಾಯಿತು.
ರಾಷ್ಟ್ರೀಯ ಜೀವನೋಪಾಯ ಅಭಿಯಾನದ ( NRLM ) ಯೋಜನೆ ಬಗ್ಗೆ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ಹರಿಪ್ರಸಾದ್ ಅವರು ಸಮಗ್ರ ಮಾಹಿತಿಯನ್ನು ನೀಡಿದರು. ತಾಲೂಕು ಯೋಜನಾ ವ್ಯವಸ್ಥಾಪಕಿ ಪ್ರತಿಮಾ ಸ್ವಸಹಾಯ ಸಂಘಗಳ ಕಾರ್ಯ ವೈಖರಿ ಹೇಗಿರಬೇಕು ಎಂದು ಸಂಪೂರ್ಣ ಮಾಹಿತಿಯನ್ನು ನೀಡಿದರು.
ಹಾಗೂ ಸಭೆಯಲ್ಲಿ ಉಪಸ್ಥಿತರಿದ್ದ ವಲಯ ಮೇಲ್ವಿಚಾರಕ ಜಯಾನಂದ ಅವರು ಸಂಘಗಳು ಸಾಲ ಪಡೆದು ಮರುಪಾವತಿಸುವ ಜವಾಬ್ದಾರಿಯ ಬಗ್ಗೆ ಎಲ್ಲಾ ಸದಸ್ಯರಿಗೂ ತಿಳಿಹೇಳಿದರು. ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಯುತ ಪ್ರಕಾಶ್ ಶೆಟ್ಟಿನೊಚ್ಚ ಅವರು ಸಂಜೀವಿನಿ ಸಂಘಗಳು ಗ್ರಾಮೀಣ ಮಹಿಳೆಯರ ಜೀವನದಲ್ಲಿ ಪ್ರಮುಖ ವಾಗಿದ್ದು, ಸಂಜೀವಿನಿ ಸದಸ್ಯರು ತಮ್ಮಲ್ಲೇ ದೊರೆಯುವ ಉತ್ಪನ್ನಗಳನ್ನು ಮೌಲ್ಯವರ್ದಿತ ಉತ್ಪನ್ನಗಳಾಗಿ ಮಾಡಿ ಮಹಿಳೆಯರು ಸ್ವತಹ ಉದ್ಯಮಿಗಳಾಗಿ ಇತರರಿಗೆ ಕೆಲಸ ನೀಡುವ ಮಟ್ಟದಲ್ಲಿ ಬೆಳೆಯಬೇಕು ಅಂತಹ ಮಹಿಳೆಯರಿಗೆ ನಮ್ಮ ಗ್ರಾಮ ಪಂಚಾಯತ್ ಎಂದಿಗೂ ಬೆಂಬಲವಾಗಿ ನಿಲ್ಲುವುದು ಎಂದು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ಹಾಗೂ ಲಿಂಗತ್ವ ವೇದಿಕೆಯ ಬಗ್ಗೆ ಲಿಂಗ ತಾರತಮ್ಯತೆಯ ಸಮಸ್ಯೆ ನಿವಾರಣೆ ಮಾಡಲು ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದು ಅಭಿಪ್ರಾಯಸಿದರು. ಬೀಟ್ ಪೊಲೀಸ್ ಹಾಗೂ ಲಿಂಗತ್ವ ವೇದಿಕೆಯ ಸದಸ್ಯರಾದ ಸಂತೋಷ್ ಅವರು ಗ್ರಾಮದ ಜನರಿಗೆ ಏನೇ ಸಮಸ್ಯೆ ಇದ್ದರೂ ಭಯಪಡದೆ ಪೊಲೀಸ್ ಇಲಾಖೆಯ ಜೊತೆ ಹೇಳಿದಾಗ ಇಲಾಖೆಯಿಂದ ನಾವು ಸದಾ ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದರು.
ಒಕ್ಕೂಟದ ಅಧ್ಯಕ್ಷೆ ವಿನುತಾ ರಜತ್ ಗೌಡ ಅವರು ನಮ್ಮ ಒಕ್ಕೂಟದಿಂದ ಸೂಪರ್ ಮಾರ್ಕೆಟ್ ಮಾಡುವ ಯೋಜನೆಯ ಬಗ್ಗೆ ತಿಳಿಸಿ, ಉಜಿರೆಯಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಸಂಜೀವಿನಿ ಬ್ರಾಂಡ್ ಬ್ರಾಂಡ್ ಅಡಿಯಲ್ಲಿ ಮಾರುಕಟ್ಟೆ ಒದಗಿಸುವ ಯೋಜನೆಯ ವಿವರವನ್ನು ತಿಳಿಸಿದಾಗ ಸರ್ವಾನುಮತದಿಂದ ಒಕ್ಕೂಟದ ಎಲ್ಲಾ ಸದಸ್ಯರು ಹರ್ಷ ವ್ಯಕ್ತಪಡಿಸಿದರು.
ಹಾಗೂ ಗ್ರಾಮ ಪಂಚಾಯಿತ್ ಉಜಿರೆಯ ಅಧ್ಯಕ್ಷರು ಅಭಿವೃದ್ಧಿ ಅಧಿಕಾರಿಯವರು ಹಾಗೂ ಆಡಳಿತ ಮಂಡಳಿಯವರು ತಮ್ಮ ಒಕ್ಕೂಟದ ಎಲ್ಲಾ ಕೆಲಸ ಕಾರ್ಯಕ್ಕೂ ಬೆನ್ನೆಲುಬಾಗಿ ನಿಂತಿರುವುದನ್ನು ಎಲ್ಲಾ ಸದಸ್ಯರಿಗೆ ತಿಳಿಸಿದರು.
ಉತ್ತಮ ಕಾರ್ಯನಿರ್ವಹಿಸುವ ಸಂಜೀವಿನಿ ಸ್ವಸಹಾಯ ಸಂಘಗಳು , CIF ಸಾಲವನ್ನು ಉದ್ದೇಶಿತ ಯೋಜನೆಗೆ ಬಳಸಿ ಯಶಸ್ವಿಯಾದ ಮಹಿಳೆಯರು ಮತ್ತು ಕಾರ್ಯಕ್ರಮಕ್ಕೆ ಸಮಯಕ್ಕೆ ಸರಿಯಾಗಿ ಭಾಗವಹಿಸಿ ಪ್ರಥಮವಾಗಿ ಹಾಜರಾತಿ ಹಾಕಿದ ಮಹಿಳೆ ಮತ್ತು ಲಕ್ಕಿ ಮಹಿಳೆ ಎಂಬ ವಿಭಾಗದಡಿ ಒಕ್ಕೂಟದ ಪರವಾಗಿ ಕಿರು ಕಾಣಿಕೆಯನ್ನು ಸಂಜೀವಿನಿ ಸದಸ್ಯರಿಗೆ ನೀಡಲಾಯಿತು.
ಬಹುಮಾನ ವಿತರಣೆಯನ್ನು ಪದಾಧಿಕಾರಿ ನಳಿನಿ ಅವರು ನಿರ್ವಹಿಸಿದರು. ಉತ್ತಮವಾಗಿ ಜನರ ಮಧ್ಯೆ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಒಕ್ಕೂಟದ ಅಧ್ಯಕ್ಷರು ವೈಯಕ್ತಿಕವಾಗಿ ಪುಟ್ಟ ಉಡುಗೊರೆಯನ್ನು ನೀಡಿ ಗೌರವಿಸಿದರು.
ಅಕ್ಕ ಕೆಫೆಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಒಕ್ಕೂಟದ ಮಾಜಿ ಅಧ್ಯಕ್ಷೆ ಹಾಗೂ ಆದಿಪರಾಶಕ್ತಿ ಸಂಜೀವಿನಿ ಸಂಘದ ಅಧ್ಯಕ್ಷೆ ಶೀಲಾವತಿ ಎಂ.ಕೆ. ಅವರನ್ನು ಎಲ್ಲರ ಪರವಾಗಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಬೆಳ್ತಂಗಡಿ ತಾಲೂಕಿನ NRLM ಕೃಷಿ ವಿಭಾಗದ ಬಂಗಾರಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಒಕ್ಕೂಟದ ಕಾರ್ಯದರ್ಶಿ ದೀಪ ನಿರ್ವಹಣೆ ಮಾಡಿದರು. ಒಕ್ಕೂಟದ ಪದಾಧಿಕಾರಿ ಚಂದ್ರಕಲಾ ಅವರು ಸ್ವಾಗತಿಸಿ, ಕೃಷಿ ಸಕಿ ಭಾಗಿರತಿ ಮತ್ತು ಪಶುಸಕ್ಕಿ ಏಕಲತ ಅವರು ಸಹಕರಿಸಿದರು ಸಹಕರಿಸಿದರು. ಅನಿತಾ ಬಂಗೇರ ವಂದಿಸಿದರು.