Site icon Suddi Belthangady

ಕೊಕ್ಕಡದ ಸರ್ಕಾರಿ ಪ್ರೌಢ ಶಾಲೆಯ ಮೂರು ವಿದ್ಯಾರ್ಥಿಗಳಿಗೆ ಜೇಸಿಐ ಭಾರತ ವಿದ್ಯಾರ್ಥಿವೇತನ

ಕೊಕ್ಕಡ: ಜೇಸಿಐ ಕೊಕ್ಕಡ ಕಪಿಲಾ ಘಟಕದ ಮೂಲಕ, ಕೊಕ್ಕಡದ ಸರ್ಕಾರಿ ಪ್ರೌಢ ಶಾಲೆಯ ಮೂರು ಪ್ರತಿಭಾವಂತ ವಿದ್ಯಾರ್ಥಿಗಳು ಜೇಸಿಐ ಇಂಡಿಯಾ ನೀಡುವ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ ಎಂದು ಘಟಕದ ಅಧ್ಯಕ್ಷೆ ಜೇಸಿ ಎಚ್‌.ಜಿ.ಎಫ್. ಡಾ. ಶೋಭಾ ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದರಡಿಯಲ್ಲಿ, 10ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ದಿವ್ಯಶ್ರೀ ಜೇಸಿಐ ಭಾರತದ ಹೆಣ್ಣು ಮಕ್ಕಳ ಸಬಲೀಕರಣ ಯೋಜನೆಯಡಿ ಆಯ್ಕೆಯಾಗಿದ್ದು, ತಿಂಗಳಿಗೆ ರೂ. 1000/- ದಂತೆ 10 ತಿಂಗಳು, ಈಂತೆ 3 ವರ್ಷಗಳ ಕಾಲ ಒಟ್ಟು ರೂ. 30,000/- ವಿದ್ಯಾರ್ಥಿವೇತನ ಪಡೆಯಲಿದ್ದಾರೆ. ಮತ್ತು 10ನೇ ತರಗತಿಯ ಮತ್ತಿಬ್ಬರು ವಿದ್ಯಾರ್ಥಿನಿಯರಾದ ಕುಮಾರಿ ಕುಶಣ್ಯಾ ಹಾಗೂ ಕುಮಾರಿ ಸವಿತಾ ಅವರು ತಲಾ ರೂ. 3000/- ರ ಒಂದು ಬಾರಿ ವಿದ್ಯಾರ್ಥಿವೇತನಕ್ಕಾಗಿ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕಿ ರೀನಾ ಎಸ್., ಎಲ್ಲಾ ಜೇಸಿಐ ಸದಸ್ಯರು ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದರು.

Exit mobile version