ನಾವೂರು: ಗ್ರಾಮ ಪಂಚಾಯತ್ ಮಟ್ಟದ ತೃಪ್ತಿ ಸಂಜೀವಿನಿ ಒಕ್ಕೂಟದ ಮಹಾಸಭೆಯನ್ನು ಸೆ. 20ರಂದು ಪಂಚಾಯತ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ಜಯಶ್ರೀ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಂಜೀವಿನಿ ದ್ಯೇಯಗೀತೆಯೊಂದಿಗೆ ಸಭೆ ಪ್ರಾರಂಭವಾಯಿತು. ಪಂಚಾಯತ್ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಎಲ್ಲ ಗಣ್ಯರು ಸೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪ್ರಸ್ತಾವಿಕವಾಗಿ ವಲಯಮೇಲ್ವಿಚಾರಕ ಜಯಾನಂದ್ ರವರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM)ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಸಂಜೀವಿನಿ ಯೋಜನೆಯ ಧ್ಯೇಯೋದ್ದೇಶದ ಬಗ್ಗೆ, ಜೀವನೋಪಾಯ ಚಟುವಟಿಕೆ ಬಗ್ಗೆ ಹಾಗೂ ಇತರ ಹಲವಾರು ವಿಷಯಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ನೀಡಿದರು.
ಎಂ.ಬಿ.ಕೆ ಸೇವಿತ ಅವರು 2024-2025ರ ವಾರ್ಷಿಕ ವರದಿ ಖರ್ಚು -ವೆಚ್ಚ ಹಾಗೂ ಆಸ್ತಿ ಜವಾಬ್ದಾರಿಯನ್ನು ಮಂಡಿಸಿದರು ನಂತರ ಚಪ್ಪಾಳೆಯ ಮೂಲಕ ವರದಿಯನ್ನು ಅನುಮೋದಿಸಲಾಯಿತು. ತದನಂತರ ಪದಾಧಿಕಾರಿಗಳ ಬದಲಾವಣೆಯನ್ನು ಮಾಡಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಜೆ. ಅವರು ಆರೋಗ್ಯದ ಬಗ್ಗೆ ಮತ್ತು ಪಂಚಾಯತ್ ನಲ್ಲಿ ಸಿಗುವ ಸೌಲಭ್ಯದ ಬಗ್ಗೆ ಸದಸ್ಯರಿಗೆ ಮಾಹಿತಿಯನ್ನು ನೀಡಿದರು.
ಪಂಚಾಯತ್ ಅಧ್ಯಕ್ಷರು ಹಿತನುಡಿಗಳನ್ನು ನೀಡಿದರು. ತಾಲೂಕು ಪಿ.ಆರ್.ಐ ಶ್ರೀಕಲಾ ಅವರು ವಿ.ಪಿ.ಆರ್.ಪಿ. ಮತ್ತು ಲಿಂಗತ್ವ ಅಭಿಯಾನ ದ ಬಗ್ಗೆ ಮಾಹಿತಿ ನೀಡಿದರು. ಮಾದಕ ವ್ಯಸನ ಮುಕ್ತ ಪ್ರತಿಜ್ಞೆ ಮಾಡಲಾಯಿತು. ನಂತರ ಒಕ್ಕೂಟದಲ್ಲಿ ಮಾದರಿ ಮಹಿಳೆ ವಿಜಯಶ್ರಿ ಅವರನ್ನು ಗುರುತಿಸಿ ಅವರನ್ನು ಗೌರವಿಸಲಾಯಿತು. ವಿಜಯಶ್ರೀ ಅನಿಸಿಕೆ ವ್ಯಕ್ತ ಪಡಿಸಿದರು.
NRLM ಸಿಬ್ಬಂದಿಗಳಿಂದ ಸಂಜೀವಿನಿ ಗೀತಾ ಹಾಡಿ ರಂಜಿಸಲಾಯಿತು. ಲಕ್ಕಿ ಮಹಿಳೆ ಚೀಟಿ ತೆಗೆದು ಸುರಬಿ ಸಂಜೀವಿನಿ ಸಂಘದ ಸದಸ್ಯೆ ವಾರಿಜ ಬಹುಮಾನ ಪಡೆದುಕೊಂಡರು.
ರಸಪ್ರಶ್ನೆ ಆಯೋಜಿಸಲಾಗಿ ವಿಜೇತರಿಗೆ ಬಹುಮಾನ ನೀಡಲಾಯಿತು. ತದನಂತರ ನಿರ್ಗಮಿತಾ ಪದಾಧಿಕಾರಿಗಳಿಗೆ ಗೌರವ ಸ್ಮರಣಿಕೆ ನೀಡಲಾಯಿತು. ಪಂಚಾಯತ್ ಸದಸ್ಯರಾದ ಗಣೇಶ್ ಗೌಡ, ಹಸೈನರ್, ವೇದಾವತಿ, ಶಾಂತಿ ಉಪಸ್ಥಿತರಿದ್ದರು. ಪಶುಸಖಿ ತುಳಸಿ ಎಲ್ಲರನ್ನು ಸ್ವಾಗತಿಸಿದರು. LCRP ಜಯಂತಿ ನಿರೂಪಿಸಿದರು. ಕೃಷಿ ಸಖಿ ಹರಿಣಾಕ್ಷಿ ಧನ್ಯವಾದವಿತ್ತರು.