ಬೆಳ್ತಂಗಡಿ: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ ಅತೀ ಅವಶ್ಯಕ ಬೇಡಿಕೆಗಳನ್ನು 30.06.2025ರಂದು ನಡೆದ ಜಿಲ್ಲಾ ಕೆ.ಡಿ.ಪಿ ಸಭೆಯಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವರ ವಿಶೇಷ ಗಮನಕ್ಕೆ ತಂದಿದ್ದು ಹಾಗೂ ಮನವಿಯನ್ನು ಸಚಿವರಿಗೆ ನೀಡಿದ್ದು ಅದರಂತೆ ಆಸ್ಪತ್ರೆಯ ಕಟ್ಟಡದ ನಿರ್ವಹಣೆಗೆ ರೂ.50.00ಲಕ್ಷ ಅನುದಾನ ಬಿಡುಗಡೆಗೊಂಡಿದ್ದು ಸದ್ರಿ ಅನುದಾನವನ್ನು ಆದ್ಯತೆಯ ಮೇರಗೆ ತಾಲೂಕು ಆಸ್ಪತ್ರೆಯಲ್ಲಿ ಶವಗಾರ ರಚನೆಗೆ ವಿನಿಯೋಗಿಸಲು ತಾಲೂಕು ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರು ಅವರು ಸಂಬಂಧಪಟ್ಟ ಆರೋಗ್ಯ ಇಲಾಖೆಯ ಇಂಜಿನಿಯರಿಂಗ್ ವಿಭಾಗಕ್ಕೆ ಸೂಚನೆಯನ್ನು ನೀಡಿದ್ದಾರೆ.
ಬೆಳ್ತಂಗಡಿ: ಸಾರ್ವಜನಿಕ ಆಸ್ಪತ್ರೆಯ ಶವಾಗಾರ ಕೇಂದ್ರ ನಿರ್ಮಾಣಕ್ಕೆ ರೂ. 50ಲಕ್ಷ ಅನುದಾನ ಬಿಡುಗಡೆ-ಶಾಸಕ ಹರೀಶ್ ಪೂಂಜರ ಮನವಿಗೆ ಸ್ಪಂದಿಸಿದ ಸರ್ಕಾರ

