ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳು ಜೇಸಿಐ ಇಂಡಿಯಾ ಕೊಡುವ ರಾಷ್ಟೀಯ ಮಟ್ಟದ ವಿದ್ಯಾರ್ಥಿ ವೇತನಕ್ಕೆ ಜೇಸಿಐ ಬೆಳ್ತಂಗಡಿ ಮೂಲಕ ಆಯ್ಕೆ ಆಗಿದ್ದಾರೆ ಎಂದು ಅಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಥಮ ಪಿಯುಸಿ ವಿಜ್ಞಾನದ ವಿದ್ಯಾರ್ಥಿನಿ ಮನಶ್ರೀ ಇವಳು ಜೆಸಿಐ ಭಾರತದ ಹೆಣ್ಣು ಮಕ್ಕಳ ಸಬಲೀಕರಣ ಯೋಜನೆ ಅಡಿಯಲ್ಲಿ ತಿಂಗಳಿಗೆ 1000/- ದಂತೆ 10 ತಿಂಗಳು ಮುಂದಿನ 2 ವರ್ಷಗಳ ಅವಧಿಗೆ ಒಟ್ಟು ಇಪ್ಪತ್ತು ಸಾವಿರ ರೂಪಾಯಿ ಹಾಗೂ ಪ್ರಥಮ ವಾಣಿಜ್ಯಶಾಸ್ತ್ರದ ವಿದ್ಯಾರ್ಥಿ ಅಜಿತ್ ಪ್ರಸಾದ್ ಅವರು ಒಂದು ಬಾರಿ ಮೂರು ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ. ಆಯ್ಕೆ ಆದ ವಿದ್ಯಾರ್ಥಿಗಳನ್ನು ಪ್ರಾಚಾರ್ಯ ಪ್ರಮೋದ್ ಕುಮಾರ್ ಅಭಿನಂದಿಸಿದ್ದಾರೆ.