ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2025-26ನೇ ಸಾಲಿನ ವಿದ್ಯಾರ್ಥಿ ಪ್ರತಿಭಾ ವೇದಿಕೆ ಉದ್ಘಾಟನಾ ಸಮಾರಂಭ ಸೆ.20ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ಶಾಸಕ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು.
ಮಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಪ್ರೋ. ಕೆ.ಆರ್. ಕವಿತಾ ಅಧ್ಯಕ್ಷತೆ ವಹಿಸಿದ್ದರು. ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ವಿಶ್ವನಾಥ್, ಪ್ರಾಂಶುಪಾಲ ಪ್ರೊ ಸುರೇಶ್ ವಿ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೋ. ಪದ್ಮನಾಭ ಕೆ., ವಿದ್ಯಾರ್ಥಿ ಪ್ರತಿಭಾ ವೇದಿಕೆ ಸಂಚಾಲಕ ಪ್ರೋ. ಮಾರುತಿ ಜಿ., ಅಧ್ಯಕ್ಷೆ ವೀಕ್ಷಿತಾ, ಉಪಾಧ್ಯಕ್ಷ ಸಂತೋಷ್, ಕಾರ್ಯದರ್ಶಿಗಳಾದ ಸಂಗೀತಾ, ಅಂಕಿತಾ, ಸ್ನಾತಕೋತ್ತರ ವಿಭಾಗದ ಪ್ರತಿನಿಧಿಗಳಾದ ನಿತೀನ್ ಶೆಟ್ಟಿ ಮತ್ತು ವೈಷ್ಣವಿ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪೂಜಾಶ್ರೀ ಹಾಗೂ ನಸಿಬಾ ನಿರೂಪಿಸಿದರು.