ನೆರಿಯ: ತಾಲೂಕಿನಲ್ಲಿ ಹೆಚ್ಚಿನ ಜನ ಸಂಖ್ಯೆ ಹೊಂದಿರುವ ಪಂಚಾಯತ್. ಸಭೆಗೆ ಅಧಿಕಾರಿಗಳು ಬಾರದೆ ಗ್ರಾಮ ಸಭೆ ಪ್ರಾರಂಭ ಮಾಡುವುದು ಬೇಡ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರಬೇಕು ಗಂಟೆ 12 ಕಳೆದರೂ ಬರುದಿಲ್ಲ. ಅವರು ನಾವು ಕಟ್ಟಿದ ತೆರಿಗೆ ಹಣದಿಂದ ಸಂಬಳ ಪಡೆಯುದು ಗ್ರಾಮ ಸಭೆಗೆ ಜನರು ಬರಲಿಲ್ಲ ಅಧಿಕಾರಿಗಳು ಇಲ್ಲ ಯಾರಿಗೆ ಗ್ರಾಮ ಸಭೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಮುರಳೀಧರ್ ಹಾಗೂ ಪಂಚಾಯತ್ ಅಧ್ಯಕ್ಷೆ ವಸಂತಿ, ಪಂಚಾಯತ್ ಪಿಡಿಓ ಸುಮಾ ಎ.ಎಸ್. ಅವರು ಗ್ರಾಮಸಭೆ ನಡೆಸಲು ಗ್ರಾಮಸ್ಥರ ಮನವೋಲಿಸಲು ಪ್ರಯತ್ನಿಸಿದರು.
ಅಧಿಕಾರಿಗಳು ಲೇಟಾಗಿ ಆಗಮಿಸಿದರು 12 ಗಂಟೆ ನಂತರ ಗ್ರಾಮ ಸಭೆ ನಡೆಸುವುದು ಬೇಡ ಎಂದು ಹೇಳಿ ಕೆಲವರು ಹೊರ ನಡೆದರು. ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಗ್ರಾಮಸಭೆಗೆ ಕೋರಂ ಇಲ್ಲದೆ ಸಭೆ ನಡೆಸುವುದು ಬೇಡ ಎಂದು ಗೊಂದಲದ ವಾತಾವರಣ ನಿರ್ಮಾಣವಾಯಿತು.
ಕೊನೆಗೆ ಪಂಚಾಯತ್ ಅಧ್ಯಕ್ಷರು ಮತ್ತು ಮಾರ್ಗದರ್ಶಿ ಅಧಿಕಾರಿ ಗ್ರಾಮ ಸಭೆಯನ್ನು ಮುಂದೂಡಿ ಮುಂದಿನ ದಿನಾಂಕ ತಿಳಿಸುವುದು ಎಂದರು.