ಕೊಯ್ಯೂರು: ಮಲೆಬೆಟ್ಟು ಶ್ರೀ ವನದುರ್ಗಾ ದೇವಾಲಯದಲ್ಲಿ ಸೆ.22 ರಿಂದ ಅ.2 ರವರೆಗೆ ನವರಾತ್ರಿ ಪೂಜಾ ಮಹೋತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೆ.22ರಂದು ರಾತ್ರಿ 7-30 ರಿಂದ ಗಣಹೋಮ, ಕುಣಿತ ಭಜನಾ ಕಾರ್ಯಕ್ರಮ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಸೆ.23 ರಂದು ರಾತ್ರಿ 7-30 ರಿಂದ ನವರಾತ್ರಿ ಪೂಜೆ, ಶ್ರೀ ರಂಗಪೂಜೆ, ಭಜನಾ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಸೆ.24 ರಂದು ರಾತ್ರಿ 7-30 ರಿಂದ ನವರಾತ್ರಿ ಪೂಜೆ, ರಂಗಪೂಜೆ, ಗಮಕ ನೃತ್ಯರೂಪಕ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಸೆ.25 ರಂದು ರಾತ್ರಿ 7-30 ನವರಾತ್ರಿ ಪೂಜೆ, ರಂಗಪೂಜೆ, ಸ್ಯಾಕ್ಸೋಫೋನ್ ವಾದನ ನಡೆಯಲಿದೆ. ರಾತ್ರಿ 9 ರಿಂದ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಸೆ.26 ರಂದು ರಾತ್ರಿ 7 ರಿಂದ ಭಜನಾ ಕಾರ್ಯಕ್ರಮ ನಂತರ ಅವನೀಶ ಕೃಷ್ಣ ಕಾಂತಾಜೆ ಮತ್ತು ಶ್ರೀ ವಿಶ್ವೇಶ್ವರ ಭಟ್ ಉಂಡೆಮನೆ ಇವರಿಂದ ಶಂಕರ ಸ್ತೋತ್ರ ವಾಹಿನಿ ರಾತ್ರಿ 9 ಗಂಟೆಗೆ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಸೆ.27 ರಿಂದ ರಾತ್ರಿ 7-30 ರಿಂದ ನವರಾತ್ರಿ ಪೂಜೆ, ಶ್ರೀ ರಂಗಪೂಜೆ ನಂತರ ಕೆ.ಆರ್ ಸುವರ್ಣ ಕುಮಾರಿ ಮತ್ತು ಮಧೂರು ಮೋಹನ ಕಲ್ಲೂರಾಯ ಗೇರುಕಟ್ಟೆ ಇವರಿಂದ ಹರಿಕಥಾ ಕಾಲಕ್ಷೇಪ ನಡೆಯಲಿದೆ. ರಾತ್ರಿ 9 ಗಂಟೆಗೆ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಸೆ.28 ರಂದು ರಾತ್ರಿ 7-30 ರಿಂದ ನವರಾತ್ರಿ ಪೂಜೆ, ರಂಗಪೂಜೆ ನಂತರ ವಸಂತಿ ಕುಳಮರ್ವ ಇವರಿಂದ ರಾಮಾಯಣದಲ್ಲಿ ಜೀವನ ಸಂದೇಶ, ರಾತ್ರಿ 9 ರಿಂದ ಮಂಗಳಾರತಿ ಪ್ರಸಾದ ವಿತರಣೆ ನಡೆಯಲಿದೆ.
ಸೆ.29 ರಂದು ರಾತ್ರಿ 7-30 ರಿಂದ ನವರಾತ್ರಿ ಪೂಜೆ, ಶ್ರೀ ರಂಗಪೂಜೆ ನಂತರ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ರಿಂದ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಸೆ.30 ರಂದು ರಾತ್ರಿ 7-30 ರಿಂದ ನವರಾತ್ರಿ ಪೂಜೆ, ರಂಗಪೂಜೆ ನಡೆಯಲಿದೆ. ನಂತರ ಭಕ್ತಿಗೀತೆ, ಭಜನಾ ಸ್ಪರ್ಧೆ ನಡೆಯಲಿದೆ. ರಾತ್ರಿ ಗಂಟೆ 9-00 ರಿಂದ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಅ.1 ರಂದು ರಾತ್ರಿ ಗಂಟೆ 7-30 ರಿಂದ ಭಜನಾ ಕಾರ್ಯಕ್ರಮ, ರಾತ್ರಿ 9-00 ರಿಂದ ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.
ಸೆ.2 ರಂದು ಬೆಳಿಗ್ಗೆ 10 ರಿಂದ ವಿಜಯ ದಶಮಿ, ಚಿತ್ರ ಬಿಡಿಸುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಯಕ್ಷಗಾನ ತಾಳಮದ್ದಳೆ- ತ್ರಿಶಂಕು ಸ್ವರ್ಗ ನಡೆಯಲಿದೆ. ಮಧ್ಯಾಹ್ನ 12-30 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಪ್ರತಿದಿನ ರಾತ್ರಿ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ.
ಸೆ.22-ಅ.2: ಮಲೆಬೆಟ್ಟು ವನದುರ್ಗಾ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವ
