Site icon Suddi Belthangady

70 ವರ್ಷದ ವೃದ್ಧನಿಂದ ಮಕ್ಕಳಿಗೆ ಲೈಂಗಿಕ ದೌರ್ಜನ್ಯ-ಧರ್ಮಸ್ಥಳ ಠಾಣೆಯಲ್ಲಿ ಪೊಕ್ಸೋ ಕೇಸ್ ದಾಖಲು

ಬೆಳ್ತಂಗಡಿ: ಬಂದಾರಿನಲ್ಲಿರುವ ಗೂಡಂಗಡಿಯ 70ರ ವೃದ್ಧ ಪುತ್ತುಮೋನು ಎಂಬಾತನು ಕೆಲ ಮಕ್ಕಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಡಿ ಧರ್ಮಸ್ಥಳ ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ಬಾಲಕರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ ಆರೋಪಿ ಇಬ್ರಾಹಿಂ ಅಲಿಯಾಸ್ ಪುತ್ತುಮೋನು ವಿರುದ್ಧ ದೂರು ದಾಖಲಾಗಿದ್ದು, ಲೈಂಗಿಕ ದೌರ್ಜನ್ಯದ ವೀಡಿಯೋ ಚಿತ್ರೀಕರಿಸಿ ಹರಿಬಿಟ್ಡಾತನ ಮೇಲೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿರುವುದಾಗಿ ತಿಳಿದುಬಂದಿದೆ.

ಪೊಕ್ಸೋ ಕಾಯ್ದೆಯಡಿ ದೂರು ದಾಖಲಾಗಿರುವ ಹಿನ್ನಲೆಯಲ್ಲಿ ದೂರುದಾರ ಸಹಿತ ಮತ್ಯಾರ ಹೆಸರು ಬಹಿರಂಗ ಪಡಿಸಲಾಗಿಲ್ಲ.

Exit mobile version