Site icon Suddi Belthangady

ಸೆ. 20ರಿಂದ ಧರ್ಮಸ್ಥಳದಿಂದ ಕೊಕ್ಕಡ-ಅರಸಿನಮಕ್ಕಿ-ಶಿಬಾಜೆ-ಉದನೆ-ಗುಂಡ್ಯ ಮಾರ್ಗವಾಗಿ ಸುಬ್ರಮಣ್ಯಕ್ಕೆ ಬಸ್ ಸಂಚಾರ ಆರಂಭ: ಶಿಬಾಜೆ ದೇವಳದ ಅಧ್ಯಕ್ಷ ಶ್ರೀಧರ್ ರಾವ್ ಅಜಿರಡ್ಕ ಮತ್ತು ದೇವಳದ ಸದಸ್ಯರ ಬಹು ದಿನಗಳ ಬೇಡಿಕೆ

ಶಿಬಾಜೆ: ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ್ ರಾವ್ ಅಜಿರಡ್ಕ ಅವರು ಮತ್ತು ದೇವಳದ ಸರ್ವ ಸದಸ್ಯರು ಹಾಗೂ ಗ್ರಾಮದ ಹಲವು ಕಾಂಗ್ರೆಸ್ ಮುಖಂಡರುಗಳು ಹಲವು ದಿನಗಳಿಂದ ಧರ್ಮಸ್ಥಳದಿಂದ ಕೊಕ್ಕಡ -ಅರಸಿನಮಕ್ಕಿ -ಶಿಬಾಜೆ -ಉದನೆ -ಗುಂಡ್ಯ ಮಾರ್ಗವಾಗಿ ಸುಬ್ರಮಣ್ಯಕ್ಕೆ ಬೇಡಿಕೆ ಡಿಪ್ಪೋ ಮ್ಯಾನೇಜರ್ ಮತ್ತು ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ ಬಳಿ ಇಟ್ಟಿದ್ದು ಇದೀಗ ಸೆ. 20ರಿಂದ ಬಸ್ ಸಂಚಾರ ಆರಂಭವಾಗಲಿದೆ ಎಂದು ದೇವಳದ ಅಧ್ಯಕ್ಷ, ಕಾಂಗ್ರೇಸ್ ಗ್ರಾಮ ಸಮಿತಿ ಅಧ್ಯಕ್ಷ ಶ್ರೀಧರ್ ರಾವ್ ಅಜಿರಡ್ಕ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.

ಈ ಮಾರ್ಗ ಮೂಲಕ ಬಸ್ ಸಂಚಾರ ಆರಂಭಗೊಂಡರೆ ದೇವಳಕ್ಕೆ ಬರುವ ಭಕ್ತರಿಗೆ ಮತ್ತು ಈ ಭಾಗದಿಂದ ಸುಬ್ರಮಣ್ಯ ಮತ್ತು ಧರ್ಮಸ್ಥಳ ಸಂಪರ್ಕಿಸುವುದಕ್ಕೆ ಬಹಳ ಹತ್ತಿರದ ಮಾರ್ಗವಾಗಿದೆ ಮುಂಚೆ ಈ ಮಾರ್ಗದಲ್ಲಿ ಸುಬ್ರಮಣ್ಯ ಮತ್ತು ಧರ್ಮಸ್ಥಳ ಬಸ್ ಸಂಚಾರ ಇತ್ತು. ಕೊರೊನ ಸಂದರ್ಭದಲ್ಲಿ ಇದು ಸ್ಥಗಿತಗೊಂಡಿತ್ತು. ಈಗ ಮತ್ತೆ ಆರಂಭವಾಗುವುದರಿಂದ ನಾವು ಮತ್ತು ಈ ಭಾಗದ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ ಎಂದು ಶ್ರೀಧರ್ ರಾವ್ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.

Exit mobile version