ಮುಂಡಾಜೆ: ಸೆ.17ರಂದು ನೇತ್ರಾವತಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯನ್ನು ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ ಅವರು ಉದ್ಘಾಟಿಸಿದರು ಪಂಚೇತನ ಅಭಿವೃದ್ಧಿ ಅಧಿಕಾರಿ ಗಾಯತ್ರಿ, ಪಂಚಾಯತ್ ಸದಸ್ಯರು ಆಶಾ ಕಾರ್ಯಕರ್ತೆಯರು ಭಾಗವಹಿಸಿದರು. ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಸುರಕ್ಷಾ ಅಧಿಕಾರಿ ರೂಪಲತಾ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಸಂಜೀವಿನಿ ತಾಲೂಕು ವಲಯ ಮೇಲ್ವಿಚಾರಕ ಜಯಾನಂದ ಅವರು ಸಂಜೀವಿನಿ ಬಗ್ಗೆ ವಿಸ್ತಾರವಾಗಿ ಮಾಹಿತಿ ನೀಡಿದರು. ಒಕ್ಕೂಟದ ಎಲ್ಲ ಪದಾಧಿಕಾರಿಗಳು, ಸಂಜೀವಿನಿ ಸಂಘದ ಸದಸ್ಯರು ಹಾಜರಿದ್ದರು. ಒಕ್ಕೂಟದ ವರದಿ ಮಂಡನೆ ಮತ್ತು ಜಮಾ ಖರ್ಚನ್ನು ಎಂ.ಬಿ.ಕೆ ಮೀನಾ ಓದಿದರು. ಕಾರ್ಯಕ್ರಮವನ್ನು ಎಲ್.ಸಿ.ಆರ್.ಪಿ ಶಾಲಿನಿ ಸ್ವಾಗತಿಸಿದರು. ಪುಷ್ಪಾವತಿ ನಿರೂಪಿಸಿದರು. ಶಾಲಿನಿ ವಂದಿಸಿದರು.
ಮುಂಡಾಜೆ: ನೇತ್ರಾವತಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ
