Site icon Suddi Belthangady

ಕನ್ಯಾಡಿ: ಶ್ರೀ ಶಾರದೋತ್ಸವ ರಜತ ಸಂಭ್ರಮ- 2025: ತಾಲೂಕು ಮಟ್ಟದ ನೃತ್ಯ ಸ್ಪರ್ಧೆ

ಕನ್ಯಾಡಿ: ಶ್ರೀ ಶಾರದೋತ್ಸವ ರಜತ ಸಂಭ್ರಮ-2025ರ ಪ್ರಯುಕ್ತ ಕನ್ಯಾಡಿ ಶಾಲಾ ರಂಗಮಂಟಪದಲ್ಲಿ ಸೆ.30ರಂದು ಬೆಳಿಗ್ಗೆ ಗಂಟೆ 9.30ರಿಂದ ತಾಲೂಕು ಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ.
ವಿಶೇಷವಾಗಿ ದೇಶಭಕ್ತಿ ಹಾಗೂ ದೇವರ ಭಕ್ತಿಗೀತೆಯ ನೃತ್ಯಗಳಿಗೆ ಹೆಚ್ಚಿನ ಆಧ್ಯತೆ ಇರಲಿ.

ಬಹುಮಾನ ವಿವರ:
ಪ್ರಥಮ:5555+ಟ್ರೋಫಿ
ದ್ವಿತೀಯ:3333+ಟ್ರೋಫಿ
ತೃತೀಯ:2222+ಟ್ರೋಫಿ

ಸೂಚನೆಗಳು:
1)ತಂಡದಲ್ಲಿ ಕನಿಷ್ಠ 5ಮಂದಿ ಮತ್ತು ಗರಿಷ್ಠ ಮಿತಿ ಇಲ್ಲ.
2)ತಂಡಕ್ಕೆ 5ನಿಮಿಷ ನೃತ್ಯಕ್ಕೆ 2ನಿಮಿಷ ವೇದಿಕೆ ಸಿದ್ಧಪಡಿಸಲು ಸಮಯ ಇದೆ.
3) ಯಾವುದೇ ಜಾತಿ,ಧರ್ಮ,ನಂಬಿಕೆಗೆ ಧಕ್ಕೆ ಉಂಟುಮಾಡುವ ಮತ್ತು ಅಶ್ಲೀಲ ವೇಷಭೂಷಣ ಮತ್ತು ನೃತ್ಯಗಳಿಗೆ ಅವಕಾಶ ಇಲ್ಲ.
4)ವೇದಿಕೆಯಲ್ಲಿ ಬೆಂಕಿ ಅಥವಾ ಇತರ ಅವಘಡ ಸಂಭವಿಸುವ ವಸ್ತುಗಳನ್ನು ಬಳಸುವಂತಿಲ್ಲ,ದೀಪವನ್ನು ಹೊರತುಪಡಿಸಿ.
5)ಭಾಗವಹಿಸಿದ ಪ್ರತಿ ತಂಡಕ್ಕೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.
6)ತೀರ್ಪುಗಾರರ ಮತ್ತು ಸಂಘಟಕರ ತೀರ್ಮಾನವೇ ಅಂತಿಮ.
7)ಶಾಲಾ ಕಾಲೇಜು ಗಳ ತಂಡಗಳು ಕೂಡ ಭಾಗವಹಿಸಬಹುದು.

ಮಾಹಿತಿಗಾಗಿ ಪ್ರಣಾಮ್ ಶೆಟ್ಟಿ +918050075853, +919731732599 ಸಂಪರ್ಕಿಸಬಹುದು.

Exit mobile version