Site icon Suddi Belthangady

ಅಂಡಿಂಜೆ: ಗ್ರಾಮ ಪಂಚಾಯತ್ ಮಟ್ಟದ ನಿಸರ್ಗ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

ಅಂಡಿಂಜೆ: ಗ್ರಾಮ ಪಂಚಾಯತ್ ಮಟ್ಟದ ನಿಸರ್ಗ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯು ಆಂಡಿಂಜೆ ಶ್ರೀ ರಾಮ ಶ್ರೀ ವಿನಾಯಕ ಭಜನಾ ಮಂದಿರದಲ್ಲಿ ನಡೆಯಿತು. ಜಯಮಾಲಾ ಅವರ ಪ್ರಾರ್ಥನೆಯೊಂದಿಗೆ 1 Vi ಪ್ರಾರಂಭಗೊಂಡ ಸಭೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ನಿತಿನ್ ಮುಂಡೇವು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ಸಂಜೀವಿನಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ವಾರ್ಷಿಕ ವರದಿ ಮತ್ತು CA ಆಡಿಟ್ ವರದಿಯನ್ನು ಮಲ್ಲಿಕಾ ಎಮ್.ಬಿ.ಕೆ ಮಂಡಿಸಿದರು. ಮತ್ತು ಸಭೆಯಲ್ಲಿ ಅನುಮೋದನೆಯನ್ನು ಪಡೆಯಲಾಯಿತು.

ಶ್ರೀದೇವಿ ಸಂಜೀವಿನಿ ಸದಸ್ಯರು ತಯಾರಿಸಿದ ಜೂಟ್ ಬ್ಯಾಗ್ ಸಂಜೀವಿನಿ ಬ್ರಾಂಡ್ ಅಸ್ಮಿತೆ ಹೆಸರಿನಲ್ಲಿ ಬಿಡುಗಡೆ ಮಾಡಿ ತಮ್ಮ ಅನುಭವ ಹಂಚಿಕೊಂಡರು. ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಒಕ್ಕೂಟದ ವ್ಯಾಪಾರ ಅಭಿವೃದ್ಧಿ ಯೋಜನೆಯನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು.

ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಅಧಿಕಾರ ಹಸ್ತಾಂತರ ಮಾಡಲಾಯಿತು. ಜಿಲ್ಲಾ ವ್ಯವಸ್ಥಾಪಕಿ ಶಕುಂತಲಾ ಯೋಜನೆಯ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ತಾಲೂಕು ವ್ಯವಸ್ಥಾಪಕ ನಿತೀಶ್ ಕುಮಾರ್ ಸದಸ್ಯರು ತಯಾರಿಸಿದ ಉತ್ಪನ್ನದ ಬ್ರಾಂಡಿಂಗ್, ಲೇಬಲಿಂಗ್. FSSAI ಬ್ಯಾಂಕ್ link ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

Exit mobile version