Site icon Suddi Belthangady

ನೆರಿಯ: ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದ ಸ್ಕೂಟರ್

ನೆರಿಯ: ನಿಯಂತ್ರಣ ತಪ್ಪಿ ಅಣಿಯೂರು ಹೊಳೆಗೆ ಸ್ಕೂಟರ್ ಬಿದ್ದ ಘಟನೆ ಸೆ. 18ರಂದು ನಡೆದಿದೆ. ಸವಾರ ಶಿವಾನಂದ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಕೂಟರ್ ಸವಾರ ಸೇತುವೆಯ ಸಮೀಪದ ಅಂಗಡಿಯ ಬಳಿಯಿಂದ ಸ್ಕೂಟರ್ ಸ್ಟಾಟ್ ಮಾಡಿ ಕೆಲವೇ ನಿಮಿಷದಲ್ಲಿ ಹೊಳೆಗೆ ಬಿದ್ದಿದೆ. ಸೇತುವೆಯ ತಡೆ ಗೋಡೆಯಲ್ಲಿ ಕೈ ಹಿಡಿದ ಪರಿಣಾಮವಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಯುವಕರ ಸಹಾಯದಿಂದ ಸ್ಕೂಟರನ್ನು ಮೇಲೆತ್ತಲಾಯಿತು. ಸೇತುವೆಯ ಎರಡು ಬದಿಯ ತಡೆಗೋಡೆ ಪೂರ್ಣ ಪ್ರಮಾಣದಲ್ಲಿ ಇಲ್ಲದೆ ಈ ಘಟನೆ ನಡೆದಿದೆ.

Exit mobile version