Site icon Suddi Belthangady

ಕಾಜೂರು: ಆಡಳಿತ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ-ಮೂರನೇ ಅವಧಿಗೆ ಅಧ್ಯಕ್ಷರಾಗಿ ಕೆ.ಯು. ಇಬ್ರಾಹಿಂ, ಕಾರ್ಯದರ್ಶಿಯಾಗಿ ಜೆ.ಹೆಚ್. ಅಬೂಬಕ್ಕರ್ ಸಿದ್ದೀಕ್

ಬೆಳ್ತಂಗಡಿ: ರಹ್ಮಾನಿಯಾ ಜುಮ್ಮಾ ಮಸ್ಜಿದ್ ಹಾಗೂ‌ ದರ್ಗಾ ಶರೀಫ್ ಕಾಜೂರು ಇದರ 2025-28ನೇ ಸಾಲಿನ ಅಧ್ಯಕ್ಷರಾಗಿ ಕೆ.ಯು. ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿಯಾಗಿ ಜೆ.ಹೆಚ್. ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿಯಾಗಿ ಡಿ.ವೈ. ಉಮರ್ ಕುಕ್ಕಾವು, ಉಪಾದ್ಯಕ್ಷರಾಗಿ ಮುಹಮ್ಮದ್ ಬಶೀರ್ ಅಹ್ಸನಿ ಅವರು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ನಿರ್ದೇಶಕರುಗಳಾಗಿ ಅಬ್ದುಲ್ ಸಲೀಂ, ಕೆ.ಯು. ಹನೀಫ್, ಬದ್ರುದ್ದೀನ್ ಹೆಚ್, ಅಬ್ದುಲ್ ಹಕೀಂ ಕೆ.ಕೆ., ಕೆ.ಯು. ಮುಹಮ್ಮದ್ ಸಖಾಫಿ, ಶರೀಫ್ ಸ‌ಅದಿ ಮತ್ತು ಯಾಕೂಬ್ ಎನ್. ಎಂ. ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ.

ವಕ್ಫ್ ನಿಯಮಾವಳಿಯಂತೆ ಇತ್ತೀಚೆಗೆ ಮತದಾನದ ಮೂಲಕ 11 ಮಂದಿಯ ಆಯ್ಕೆ ನಡೆದಿತ್ತು. ಚುನಾಯಿತ ಪ್ರತಿನಿಧಿಗಳು ಸೆ.17ರಂದು ಸಭೆ ಸೇರಿ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಿದರು. ಅಧ್ಯಕ್ಷತೆಗೆ ನಡೆದ ಗುಪ್ತ ಮತದಾನದಲ್ಲಿ ಬಶೀರ್ ಅಹ್ಸನಿ ಮತ್ತು ಕೆ.ಯು. ಇಬ್ರಾಹಿಂ ಅವರು ಸ್ಪರ್ಧಿಸಿ ಮತದಾನದ ವೇಳೆ ಕೆ.ಯು ಇಬ್ರಾಹಿಂ ಅವರು 6 ಮತಗಳು ಮತ್ತು ಬಶೀರ್ ಅಹ್ಸನಿ ಅವರು 5 ಮತಗಳನ್ನು ಪಡೆದರು.

ಸಯ್ಯಿದ್ ಕಾಜೂರು ತಂಙಳ್ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಚುನಾವಣಾ ವೀಕ್ಷಕರಾಗಿ ಮತ್ತು ಚುನಾವಣಾಧಿಕಾರಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್ ಹಾಜಿ ಮಂಗಳೂರು ಸಬೆ ನಡೆಸಿಕೊಟ್ಟರು.

Exit mobile version