Site icon Suddi Belthangady

ರೆಖ್ಯ: ಗಗನ್ ಕೆ.ಎಸ್. ತ್ರೋಬಾಲ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ರೆಖ್ಯ: ಪದವಿಪೂರ್ವ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟ ಸೆ. 15ರಂದು ಸುಬ್ರಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಜಿಲ್ಲೆಯ ನಾನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ತ್ರೋಬಾಲ್ ನಲ್ಲಿ ಪ್ರದರ್ಶಿಸಿದರು. ಈ ಪಂದ್ಯಾಟದಲ್ಲಿ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಗಗನ್ ಕೆ.ಎಸ್. ಉತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ

ಇವರು ರೆಖ್ಯ ಗ್ರಾಮದ ಕೊಲೆಚ್ಚಾವು ಮನೆ ದಿ. ಸುಬ್ರಮಣ್ಯ ಮತ್ತು ಜಯಂತಿ ದಂಪತಿಯ ಪುತ್ರನಾಗಿದ್ದು, ಶ್ರೀ ಸುಬ್ರಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ರಾಧಾಕೃಷ್ಣ ಗರಡಿಯಲ್ಲಿ ಪಳಗಿರುತ್ತಾರೆ. ಇವರು ರಾಜ್ಯ ಮಟ್ಟದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಿ ಎಂದು ಹಿತೈಷಿಗಳು ಗ್ರಾಮಸ್ಥರು ಶುಭ ಹಾರೈಸಿದರು.

Exit mobile version