Site icon Suddi Belthangady

ಉಜಿರೆ: ದೊಂಪದಪಲ್ಕೆ ಶಾಲೆಗೆ ಮೈಸೂರು ಗಾರ್ಮೆಂಟ್ಸ್ ನಿಂದ ಸಮವಸ್ತ್ರ ವಿತರಣೆ

ಉಜಿರೆ: ದೊಂಪದಪಲ್ಕೆ ಸ. ಹಿ. ಪ್ರಾ. ಶಾಲೆಯಲ್ಲಿ ಮೈಸೂರ್ ಗಾರ್ಮೆಂಟ್ಸ್ ನಿಂದ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ದಾಮೋದರ ಉಪಸ್ಥಿತಿಯಲ್ಲಿ ಮೈಸೂರು ಗಾರ್ಮೆಂಟ್ಸ್ ನ ಮಾಲಕ ಮಹೇಂದ್ರ ಅವರು ಸುಮಾರು 20,000 ಮೌಲ್ಯದ ಉತ್ತಮ ಗುಣಮಟ್ಟದ ಸಮವಸ್ತ್ರವನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಿ ಶುಭ ಹಾರೈಸಿದರು.

ಎಸ್‌.ಡಿ.ಎಂ.ಸಿ ಯಿಂದ ಮಹೇಂದ್ರ ಅವರನ್ನು ಗೌರವಿಸಲಾಯಿತು. ಹಿರಿಯರಾದ ನಿವೃತ್ತ ಕೆ.ಎಸ್.ಆರ್.ಟಿ.ಸಿ. ಉದ್ಯೋಗಿ ನಾರಾಯಣ ಹೆಗ್ಡೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸೌಮ್ಯ ಎಸ್‌.ಡಿ.ಎಂ.ಸಿ ಉಪಾಧ್ಯಕ್ಷೆ ರಮ್ಯ, ಸದಸ್ಯರು, ಪೋಷಕರು, ಶಾಲಾ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version