ಬೆಳ್ತಂಗಡಿ: ಬಿ.ಎಂ.ಎಸ್ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಮತ್ತು ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು. ವಿಶ್ವಕರ್ಮ ಜಯಂತಿಯ ಹಾಗೂ ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಮಹತ್ವವನ್ನು ಭಾರತೀಯ ಮಜ್ದೂರ್ ಸಂಘದ ತಾಲೂಕು ಸಮಿತಿಯ ಅಧ್ಯಕ್ಷ ಉದಯ್ ಬಿ.ಕೆ. ಅವರು ತಿಳಿಸಿದರು. ಮತ್ತು ಭಾರತೀಯ ಮಜ್ದೂರ್ ಸಂಘದಿಂದ ವಿವಿಧ ಕಾರ್ಮಿಕರಿಗೆ ನೀಡುವ ಸೇವೆಗಳ ಬಗ್ಗೆ ಕೂಡ ಉಲ್ಲೇಖಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬೀಡಿ ಮಜ್ದೂರ್ ಸಂಘದ ಸಂಚಾಲಕಿ ಶಶಿಕಲಾ ಕೊಯ್ಯೂರು ಹಾಗೂ ಬಿ.ಎಂ.ಎಸ್. ನ ಸದಸ್ಯರು ಹಾಗೂ ಕಚೇರಿ ಸಿಬಂದಿಗಳು ಉಪಸ್ಥಿತರಿದ್ದರು. ‘ನನ್ನ ಮನೆ ಬಿಎಂಎಸ್ ಮನೆ” ಎಂಬ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬಿ.ಎಂ.ಎಸ್ ನ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯನ್ ಸ್ವಾಗತಿಸಿ, ವಂದಿಸಿದರು.