ಕಲ್ಮಂಜ: ಬೆರ್ಕೆ ಮನೆ ಸತ್ಯನ್ ಪಲ್ಕೆ ನಿವಾಸಿ ಅಡುಗೆ ಪಾಕ ತಜ್ಞ ಪಾಂಡುರಂಗ ಕಾಕತ್ಕರ್ (57ವ) ಸೆ.16ರಂದು ವಿಧಿವಶರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅಡುಗೆಯ ಪಾಕ ಪ್ರವೀಣರೆಂದೇ ಖ್ಯಾತಿ ಪಡೆದು, ಪಾಂಡು ಭಟ್ಟರೆಂದೇ ಖ್ಯಾತಿ ಪಡೆದಿದ್ದರು. ಅವರು ಪತ್ನಿ, ಮಗ, ಸೊಸೆ ಮತ್ತು ಮೊಮ್ಮಗಳನ್ನು ಅಗಲಿದ್ದಾರೆ.
ಅಡುಗೆ ಪಾಕ ತಜ್ಞ ಪಾಂಡುರಂಗ ಕಾಕತ್ಕರ್ ನಿಧನ
