ಲಾಯಿಲ: ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆರ್ಕೆ ಕಾವಟೆಗೆ ಹೋಗುವ ರಸ್ತೆಯಲ್ಲಿ ಕಸವನ್ನು ಗಾಡಿಯಲ್ಲಿ ತಂದು ಹಾಕಿದ್ದು, ಈ ಬಗ್ಗೆ ಸ್ವಚ್ಛತಾ ಕಾರ್ಮಿಕರು ಹಾಗೂ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿಗೆ ಬಂದು ಲೆಕ್ಕಸಹಾಯಕಿ ಸುಪ್ರಿತಾ ಶೆಟ್ಟಿ ಅವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಬದಿ ಬಿಸಾಡಿದ್ದ ಗೋಣಿಚಿಲಗಳನ್ನು ತೆರೆದಾಗ ಅದರಲ್ಲಿ ಕಸ ಹಾಕಿದವರ ಬಗ್ಗೆ ಮಾಹಿತಿ ದೊರಕಿದೆ. ಕಸ ಹಾಕಿದವರನ್ನು ಕರೆಸಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಡಿ.ಪಿ. ಹಾಗೂ ಕಾರ್ಯದರ್ಶಿ ತಾರಾನಾಥ್ ನಾಯ್ಕ ಅವರು ದಂಡನೆ ಶುಲ್ಕ ವಿಧಿಸಿ ಕಸವನ್ನು ಕಸ ಹಾಕಿದವರಿಂದಲೇ ತೆರವುಗೊಳಿಸಿದ್ದಾರೆ.
ಲಾಯಿಲ: ಪಂಚಾಯತ್ ದಂಡ ವಿಧಿಸಿ ಕಸ ತೆರವು
