ಬೆಳ್ತಂಗಡಿ: ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ ದಿವ್ಯ ಆಶೀರ್ವಾದದೊಂದಿಗೆ, ಶಿವಪ್ರಸಾದ ಪರೋಹಿತ್ ಸವಣಾಲು ಅವರ ಪೌರೋಹಿತ್ಯದಲ್ಲಿ ಸೆ.16ರಂದು ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ವಿಶ್ವಕರ್ಮ ಯಜ್ಞ ಮತ್ತು ಪೂಜೆ ನಡೆಯಿತು.
ಸೆ.16ರಂದು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಸಭಾಅಧ್ಯಕ್ಷತೆಯನ್ನು ಬೆಳ್ತಂಗಡಿ ವಿಶ್ವಕರ್ಮಾಭ್ಯುದಯ ಅಧ್ಯಕ್ಷ ಗಣೇಶ್ ಆಚಾರ್ಯ ವಹಿಸಿದ್ದರು. ದಕ್ಷಿಣ ಕನ್ನಡ ಮತ್ತು ಉಡುಪಿ ವಿಶ್ವಕರ್ಮ ಒಕ್ಕೂಟದ ಕ್ಷೇತ್ರದ ಪ್ರತಿನಿಧಿ ಹರ್ಷವರ್ಧನ್ ನಿಟ್ಟೆ ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಕಾರುಣ್ಯ ಸೇತು ಟ್ರಸ್ಟ್ ಸಂಸ್ಥಾಪಕ ಸ್ವಸ್ತಿಕ್ ಆರ್ಯ, ಉದ್ಯಮಿ ವಾಮನ ಆಚಾರ್ಯ, ನಿವೃತ್ತ ಸರಕಾರಿ ನೌಕರ ಸರಸ್ವತಿ ನಿರಂಜನ್ ಆಚಾರ್ಯ, ಉದ್ಯಮಿ ಸುರೇಂದ್ರ ಆಚಾರ್ಯ ಕನ್ನಾಜೆ, ವಿಶ್ವಕರ್ಮ ಕಮ್ಮಾರರ ಗುಡಿ ಕೈಗಾರಿಕಾ ಸಂಘದ ಗೌರವ ಸಲಹೆಗಾರರ ಪಿ.ಎನ್ ರಮೇಶ್ ಆಚಾರ್ಯ ಮದ್ದಡ್ಕ, ಬೆಳ್ತಂಗಡಿ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನ: ವಾಸುದೇವ ಆಚಾರ್ಯ, ಚೇತನ್ ಆಚಾರ್ಯ, ಆಜಯ್ ಆಚಾರ್ಯ, ಉಪೇಂದ್ರ ಆಚಾರ್ಯ, ಸಂತೋಷ್ ಆಚಾರ್ಯ, ಯೋಗೀಶ್ ಆಚಾರ್ಯ, ಅನ್ವಿ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಸದಸ್ಯರಿಗೆ ಸನ್ಮಾನ: ಗೋಪಾಲ ಆಚಾರ್ಯ, ಸುಂದರ ಆಚಾರ್ಯ, ಮೋನಪ್ಪ ಆಚಾರ್ಯ, ಆಶೋಕ್ ಆಚಾರ್ಯ, ಕೃಷ್ಣ ಆಚಾರ್ಯ, ಉದಯ್ ಆಚಾರ್ಯ, ವೆಂಕಟೇಶ್ ಆಚಾರ್ಯ, ಸುಂದರ ಆಚಾರ್ಯ, ಶಿವರಾಮ ಆಚಾರ್ಯ ಹಾಗೂ ಶೇಖರ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಕಾರುಣ್ಯ ಸೇತು ಟ್ರಸ್ಟ್ ಸಂಸ್ಥಾಪಕ ಸ್ವಸ್ತಿಕ್ ಆರ್ಯ ಅವರನ್ನು ಸನ್ಮಾನಿಸಲಾಯಿತು. 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಯಿತು.
ಸಂಗೀತ ಶಿಕ್ಷಕಿ ಗಾಯತ್ರಿ ಪ್ರಾರ್ಥಿಸಿದರು. ಲಾಯಿಲ ವಿಶ್ವಕರ್ಮಾಭ್ಯುದಯ ಸಂಘದ ಕಾರ್ಯದರ್ಶಿ ರಾಮ್ ಪ್ರಸಾದ್ ಎನ್.ಎಸ್. ಸ್ವಾಗತಿಸಿ, ರುಕ್ಮಯ್ಯ ಆಚಾರ್ಯ ಹಾಗೂ ರಮೇಶ್ ಆಚಾರ್ಯ ನಿರೂಪಿಸಿದರು.
ಸಂಘದ ಕೋಶಾಧಿಕಾರಿ ಸದಾನಂದ ಆಚಾರ್ಯ ಧನ್ಯವಾದವಿತ್ತರು.