Site icon Suddi Belthangady

ಮಾಲಾಡಿ: ಗ್ರಾಮ ಪಂಚಾಯತ್ ಗ್ರಾಮ ಸಭೆ

ಮಾಲಾಡಿ: ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಮೊದಲ ಸುತ್ತಿನ ಗ್ರಾಮ ಸಭೆಯು ಸೆ. 16ರಂದು ಗ್ರಾಮ ಪಂಚಾಯತ್‌ ಸಭಾಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.

ಕಳೆದ ಹಲವಾರು ವರ್ಷದಿಂದ ಪುರಿಯ ರಸ್ತೆ ಬಗ್ಗೆ ಪ್ರಧಾನ ಮಂತ್ರಿಯವರಿಗೆ, ಶಾಸಕರಿಗೆ, ಜಿಲ್ಲಾಧಿಕಾರಿ ಗಳಿಗೆ, ಇಲಾಖಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದುವರೆಗೆ ರಸ್ತೆ ಕಾಮಗಾರಿಗೆ ಪೂರ್ಣಗೊಳಿಸಿಲ್ಲ. ಜಲ್ಲಿ ಹಾಕಿದ್ದರಿಂದ ವಾಹನ ಚಲಿಸಲು ನಡೆದಾಡಲು ಸಾಧ್ಯವಿಲ್ಲದೇ ಪರದಾಡುವ ಸಮಸ್ಯೆಗಳು ಎದುರಾಗಿದೆ. ನಮ್ಮ ಆಯಸ್ಸು ಸುಮಾರು 10ವರ್ಷ ಕಡಿಮೆ ಆಗಿದೆ. ಇದೆ ರೀತಿ ಆದರೆ ಉಗ್ರ ಹೋರಾಟ ಮಾಡುತ್ತೇವೆ. ಊರ್ಲ ರಸ್ತೆ ಉತ್ತಮ ರೀತಿಯಲ್ಲಿ ಕಾಮಗಾರಿ ನಡೆದಿದೆ ಅಧಿಕಾರಿಯವರಿಗೆ ಅಭಿನಂದನೆಗಳು ಸಲ್ಲಿಸಿದರು.

ಕೆತ್ತಿಗುಡ್ಡೆ ತಡೆಗೋಡೆ ಸರಿಯಾಗಿ ನಿರ್ವಹಿಸಿಲ್ಲ ಎಂದು ಗ್ರಾಮಸ್ಥರು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಯವರಲ್ಲಿ ಬೇಸರ ವ್ಯಕ್ತಪಡಿಸಿದರು. ಕಕ್ಕೇನಾ ಎಸ್.ಸಿ. ಕಾಲೋನಿ ಬಳಿ ಟಿಸಿ ಅಳವಡಿಸುವ ಬಗ್ಗೆ, ವಿದ್ಯುತ್ ಕಂಬ ಸ್ಥಳಾಂತರ ಮಾಡುವ ಕುರಿತು, ಫೋನ್ ಮಾಡುವಾಗ ಅಧಿಕಾರಿಗಳು ಸರಿಯಾಗಿ ಸ್ಪಂದನೆ ನೀಡುತ್ತಿಲ್ಲದರ ಬಗ್ಗೆ ಮೆಸ್ಕಾಂ ಅಧಿಕಾರಿಯವರಲ್ಲಿ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಕಾಡು ಪ್ರಾಣಿಗಳಿಂದ ಕೃಷಿಯನ್ನು ರಕ್ಷಿಸಿಕೊಳ್ಳಲು ಸಹಕಾರ ನೀಡುವಂತೆ ಅರಣ್ಯ ಇಲಾಖಧಿಕಾರಿಯವರಲ್ಲಿ ವಿನಂತಿಸಿದರು. ಜಲ ಜೀವನ್ ಮಿಷನ್ ಯೋಜನೆಯಡಿ ಕಳಪೆ ಕಾಮಗಾರಿ ನಡೆದಿದೆ. ಕಾಮಗಾರಿ ಪೂರ್ಣ ಗೊಳ್ಳದೆ ಸಮಸ್ಯೆ ಎದುರಿಸುತ್ತಿದ್ದೇವೆ. ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣ ಗೊಳಿಸಲು ಕ್ರಮ ಕೈಗೊಂಡಿದ್ದೇವೆ ಎಂದು ಗ್ರಾಮೀಣ ಕುಡಿಯುವ ನೀರು ಯೋಜನೆ ಅಧಿಕಾರಿ ತಿಳಿಸಿದರು.

ಬೇಡಿಕೆ ಮತ್ತು ಸಮಸ್ಯೆ ಕರಿಯಬೆಯಿಂದ ರಸ್ತೆಯಲ್ಲಿಯೇ ಕಸ ಬಿಸಾಡುತ್ತಿರುವ ಬಗ್ಗೆ, ಸ್ಟ್ರೀಟ್ ಲೈಟ್ ಹಳವಡಿಸುವಂತೆ ಗ್ರಾಮಸ್ಥರ ಬೇಡಿಕೆ, ಕಳೆದ ವರ್ಷ ದಿಂದ ಹಕ್ಕು ಪತ್ರ ವಂಚಿತ ಫಲನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುವಂತೆ, ಸಾರ್ವಜನಿಕ ರಸ್ತೆಗಳು ಗ್ರಾಮ ಪಂಚಾಯತ್ ಸುರ್ಪದಿಗೆ ಪಡೆಯುವಂತೆ ಕ್ರಮ ಕೈಗೊಳ್ಳುವ ಬಗ್ಗೆ, ಸಾರ್ವಜನಿಕರಿಗೆ ತೊಂದರೆಯಾಗುವಂತ ಗೂಡಗoಡಿ ತೆರವು ಗೊಳಿಸುವಂತೆ ಗ್ರಾಮ ಸಭೆ ಯಲ್ಲಿ ಮನವಿ ಮಾಡಿದರು.9-11ಗ್ರಾಮ ಪಂಚಾಯತ್ ನಲ್ಲಿ ಯೆ ಆಗಬೇಕು, ಈಗ ಮೂಡಕ್ಕೆ ಹೋಗುವುದರಿಂದ 6ತಿಂಗಳು ಆದ್ರೂ ಬರುವುದಿಲ್ಲ. ಅದನ್ನು ಗ್ರಾಮ ಪಂಚಾಯತ್ ನಲ್ಲಿ ಯೆ 9-11ಮಾಡಲು ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿ ಅಧಿಕಾರಿಗಳಿಗೆ ಕಳುಹಿಸಿ ಕೊಡಬೇಕು ಎಂದು ಗ್ರಾಮಸ್ಥರ ಒತ್ತಾಯ.

ನೋಡೆಲ್ ಅಧಿಕಾರಿಯಾಗಿ ಬೆಳ್ತಂಗಡಿ ಸಾಮಾಜಿಕ ಅರಣ್ಯ ಇಲಾಖೆಯ ಶಿವರವರು ಭಾಗವಹಿಸಿ ಸಭೆಯನ್ನು ಮುನ್ನಡೆಸಿದರು. ಉಪಾಧ್ಯಕ್ಷೆ ಸೆಲೆಸ್ಟಿನ್ ಡಿಸೋಜಾ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ. ರಾಜಶೇಖ‌ರ್ ರೈ, ಸದಸ್ಯರುಗಳಾದ ಸುಸ್ಸಾನ ಡಿಸೋಜಾ, ಎಸ್‌. ಬೇಬಿ ಸುವರ್ಣಾ, ಸುಧಾಕರ ಆಳ್ವ, ಜಯಂತಿ, ಉಮೇಶ್, ಬೆನಡಿಕ್ಟ್ ಮಿರಾಂದ, ವಸಂತ ಪೂಜಾರಿ, ರಾಜೇಶ್, ಐರಿನ್ ಮೊರಾಸ್, ಫಾರ್ಝನ, ವಿದ್ಯಾ ಪಿ. ಸಾಲಿಯಾನ್, ರುಬೀನಾ, ಗುಲಾಬಿ, ಉಪಸ್ಥಿತರಿದ್ದರು. ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿದರು. ಅಂಗನವಾಡಿ ಆಶಾ ಕಾರ್ಯತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version