Site icon Suddi Belthangady

ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕನ್ಯಾ ಸಂಕ್ರಮಣ, ತೆನೆ ಹಬ್ಬ

ಗೇರುಕಟ್ಟೆ: ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕನ್ಯಾ ಸಂಕ್ರಮಣ ತೆನೆ ಹಬ್ಬ ಹೊಸಅಕ್ಕಿ ಊಟ ಸೆ. 16ರಂದು ನಡೆಯಿತು. ರಥ ಬೀದಿಯಲ್ಲಿ ಶ್ರೀಕ್ಷೇತ್ರದ ಭಕ್ತರಿಗೆ ಹಂಚಲು ಸಿದ್ದಗೊಂಡಿರುವ ಹಚ್ಚ ಹಸುರಾಗಿ ಬೆಳೆದಿರುವ ಬತ್ತದ ಪೈರು, ಕದಿರುತೆನೆ ಭಕ್ತಾಭಿಮಾನಿಗಳಿಗೆ ವಿತರಣೆ ನಡೆಯಿತು.

ದೇವರಿಗೆ, ಕ್ಷೇತ್ರದ ದೈವಗಳಿಗೆ ಸಂಕ್ರಮಣ ಪೂಜೆ, ಪಲ್ಲ ಪೂಜೆ ಬಳಿಕ ಗೊಪ್ಪರಿಗೆ ಇಳಿಸಲಾಯಿತು. ನಂತರ ಅನ್ನ ಸಂತರ್ಪಣೆ ನಡೆಯಿತು. ವ್ಯವಸ್ಥಾ ಪನಾ ಸಮಿತಿ ಸದಸ್ಯರು, ಅರ್ಚಕ ವೃಂದ, ಸಿಬ್ಬಂದಿ ಉಪಸ್ಥಿತರಿದ್ದು ಸಹಕರಿಸಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Exit mobile version