Site icon Suddi Belthangady

ರೆಖ್ಯ: ಎನ್.ಹೆಚ್. 75ರ ಪರಕ್ಕಳ ತಿರುವಿನಲ್ಲಿ ಅಪಘಾತ-ಒಂದೇ ಜಾಗದಲ್ಲಿ ಎರಡು ತಿಂಗಳಲ್ಲಿ 22ನೇ ಅಪಘಾತ-ಅವೈಜ್ಞಾನಿಕ ಕಾಮಗಾರಿಯೇ ಅಪಘಾತಕ್ಕೆ ಕಾರಣ-ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಚಾಲಕನ ಮೇಲೆ ಹಲ್ಲೆ ನಡೆಸಿದ ಎನ್.ಹೆಚ್. 75ರ ಸಿಬ್ಬಂದಿ

ರೆಖ್ಯ: ಎನ್. ಹೆಚ್. 75ರಲ್ಲಿ ಬೆಂಗಳೂರಿನಿಂದ ಮಂಗಳೂರು ಕಡೆ ಬರುತ್ತಿದ್ದ ಸರಕು ಸಾಗಾಟದ ವಾಹನವೊಂದು ಪರಕ್ಕಳದ ತಿರುವಿನಲ್ಲಿ ಆಫಘಾತಕ್ಕೆ ಒಳಗಾಗಿದೆ. ರೋಡ್ ನಲ್ಲಿ ಸಿಸಿ ಕ್ಯಾಮರಾ ಮೇಂಟೈನ್ ಮಾಡುತ್ತಿದ್ದ ಸಿಬ್ಬಂದಿಯೋರ್ವ ಅಪಘಾತಕ್ಕೆ ಒಳಗಾಗಿದ್ದ ಸರಕು ವಾಹನದ ಚಾಲಕನಿಗೆ ಮನಸೋ ಇಚ್ಛೆ ಥಳಿಸಿದ ಘಟನೆ ಸೆ. 16ರಂದು ವರದಿಯಾಗಿದೆ. ಹಲ್ಲೆ ಮಾಡುತ್ತಿದ್ದ ವಿಡಿಯೋವನ್ನು ಸ್ಥಳೀಯರು ಚಿತ್ರೀಕರಿಸಿದ್ದು ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಪರಕ್ಕಳ ತಿರುವಿನಲ್ಲಿ ಎರಡು ತಿಂಗಳಲ್ಲಿ ಇದು 22ನೇ ಆಪಘಾತ ಎಂದು ಸ್ಥಳೀಯರು ಹೇಳುತ್ತಿದ್ದೂ, ಹೈವೇ ಕಾಮಗಾರಿಯವರ ಅವೈಜ್ಞಾನಿಕ ಕಾಮಗಾರಿಯೇ ಈ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದೂ, ಈ ವಿಚಾರವಾಗಿ ಅನೇಕ ಬಾರಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಸರಕಾರವಾಗಲಿ, ರಾಜಕೀಯ ವ್ಯಕ್ತಿಗಳಾಗಲಿ ಈ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ ಎಂದು ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ. ಅದಲ್ಲದೆ ಈ ಭಾಗದಲ್ಲಿ ಇನ್ನೂ ಹಲವು ಕಡೆ ಅವೈಜ್ಞಾನಿಕ ಕಾಮಗಾರಿ ನಡೆದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Exit mobile version