Site icon Suddi Belthangady

ಇಂದಬೆಟ್ಟು: ಶಾಲಾ ಬಾಲಕಿಗೆ ಬೈಕ್ ಡಿಕ್ಕಿ- ಶಾಲಾ ಮುಂಭಾಗ ಮುಖ್ಯರಸ್ತೆಯಲ್ಲಿ ಸೂಚನಾ ಫಲಕ ಅಳವಡಿಸುವಂತೆ ಸಾರ್ವಜನಿಕರ ಆಗ್ರಹ

ಇಂದಬೆಟ್ಟು: ಬಂಗಾಡಿ ಸ.ಹಿ.ಪ್ರಾ. ಶಾಲೆಯ ಮುಂಭಾಗ ಮುಖ್ಯರಸ್ತೆಯಲ್ಲಿ (pwd) ಯಾವುದೇ ಸೂಚನಾ ಫಲಕ ಅಳವಡಿಸದೆ ಹಾಗೂ ಈ ರಸ್ತೆ ಬದಿಯಲ್ಲಿ ನಡೆದಾಡಲೂ ಕಾಲು ದಾರಿಯೇ ಇಲ್ಲ. ಹಲವು ಕಡೆ ಕಾಲು ದಾರಿ ಇದ್ದರೂ ರಸ್ತೆ ಬದಿ ಉದ್ದಕ್ಕೊ ಗಿಡ ಗಂಟಿಗಳು ಬೆಳೆದು ನಡೆದಾಡುವುದು ಕಷ್ಟ, ಶಾಲೆ ಬಿಡುವ ಸಮಯದಲ್ಲಿ ನಿರಂತರ ಶಾಲಾ ಮಕ್ಕಳು ಆಪಾಘಾತಕಿಡಾಗುತ್ತಿದ್ದು, ಸೆ.15ರಂದು ಸಂಜೆ ಶಾಲೆ ಬಿಡುವ ಸಮಯದಲ್ಲಿ ಶಾಲಾ ಬಾಲಕಿಗೆ ಬೈಕ್ ಡಿಕ್ಕಿ ಹೊಡೆದು ಸಣ್ಣ ಪುಟ್ಟ ಗಾಯಗಳಾಗಿವೆ.

ಇತ್ತೀಚಿಗೆ ಶಾಲಾ ಬಾಲಕನಿಗೆ ಕಾರು ಡಿಕ್ಕಿ ಹೊಡೆದು ಸಣ್ಣ ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದರು. ಸಂಬಂಧಪಟ್ಟ ಇಲಾಖೆಯವರು ರಸ್ತೆ ಬದಿಯ ಹುಲ್ಲು ಗಿಡಗಳನ್ನು ತೆರವುಗೊಳಿಸಿ ನಡೆದಾಡಲು ಸಮರ್ಪಕ ಕಾಲು ದಾರಿ ಹಾಗೂ ಶಾಲಾ ವಠಾರಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವಂತೆ ಸಾರ್ವಜನಿಕರ ಆಗ್ರಹ.

Exit mobile version