ಮುಂಡಾಜೆ :ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಮುಂಡಾಜೆ ಯುವವಾಹಿನಿ ಸಂಚಾಲನ ಸಮಿತಿಯ ಆತಿಥ್ಯದಲ್ಲಿ ಬಿರುವೆರೆ ಗೊಬ್ಬು ಕೆಸರ್ ದ ಕಂಡಡ್ ಕಾರ್ಯಕ್ರಮ ಸೆ. 14ರಂದು ಮುಂಡಾಜೆಯ ಪಿಲತಡ್ಕದ ಪೂವಪ್ಪ ಪೂಜಾರಿಯವರ ಗದ್ದೆಯಲ್ಲಿ ನಡೆಯಿತು.
ಕುದ್ರೋಳಿ ದೇವಸ್ಥಾನದ ಅರ್ಚಕ ರೂಪೇಶ್ ಶಾಂತಿ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕೂಳೂರು, ಪ್ರಚಾರ ನಿರ್ದೇಶಕ ಭಾಸ್ಕರ್ ಕೋಟ್ಯಾನ್ ಸಸಿಹಿತ್ಲು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ,ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು ಆಗಮಿಸಿ ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಯುವವಾಹಿನಿ ಬೆಳ್ತಂಗಡಿ ಘಟಕದ ಮಾಜಿ ಅಧ್ಯಕ್ಷ ಎಂ.ಕೆ. ಪ್ರಸಾದ್, ಅಶ್ವತ್ ಕುಮಾರ್, ಹರೀಶ್ ಸುವರ್ಣ, ಸುಜಾತ ಅಣ್ಣಿ ಪೂಜಾರಿ, ಸದಾಶಿವ ಊರ, ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿಯ ನಿರ್ದೇಶಕರುಗಳಾದ ಸಂತೋಷ್ ಕೆ.ಸಿ, ರವೀಂದ್ರ ಬಿ. ಅಮೀನ್, ಜಯ ಕುಮಾರ್ ನಡ, ಸುನಿಲ್ ಕನ್ಯಾಡಿ, ನಮಿತಾ ಪೂಜಾರಿ, ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಬಂಗೇರ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಸದಾನಂದ ಬಿ ಮುಂಡಾಜೆ ಹಾಗೂ ಬಾಬು ಪೂಜಾರಿ ಕೂಳೂರು ಇವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ವಿಠಲ್ ಸಿ. ಪೂಜಾರಿ ಹೊಸಂಗಡಿ, ಅಣ್ಣಿ ಪೂಜಾರಿ ಉಜಿರೆ, ಕಿಶೋರ್ ಕುರುಡ್ಯ, ನಾರಾಯಣ ಪೂಜಾರಿ, ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಮುಂಡಾಜೆ ಗ್ರಾಮದ ಬಿಲ್ಲವರು ಹಾಗೂ ಬೆಳ್ತಂಗಡಿ ಘಟಕದ ಎಲ್ಲಾ ಸದಸ್ಯರೂ ಭಾಗವಹಿಸಿ ಕೆಸರ್ ದ ಗೊಬ್ಬ ಕಾರ್ಯಕ್ರಮದ ಸಂಭ್ರಮದಲ್ಲಿ ಪಾಲ್ಗೊಂಡರು.
ಆಗಮಿಸಿದ ಎಲ್ಲಾ ಸಮಾಜ ಬಾಂಧವರನ್ನು ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಮುಂಡಾಜೆ ಯುವವಾಹಿನಿ ಸಂಚಾಲನ ಸಮಿತಿ ಅಧ್ಯಕ್ಷ ಕೇಶವ ಮುಂಡಾಜೆ ಆತ್ಮೀಯವಾಗಿ ಸ್ವಾಗತಿಸಿದರು. ಘಟಕದ ಉಪಾಧ್ಯಕ್ಷ ಸಂತೋಷ್ ಅರಳಿ, ಕಾರ್ಯದರ್ಶಿ ಮಧುರ ರಾಘವ್, ಕೋಶಾಧಿಕಾರಿ ನಾಗೇಶ್ ಅದೆಲು, ನಿರ್ದೇಶಕರು ಹಾಗೂ ಸಂಘಟನಾ ಕಾರ್ಯದರ್ಶಿ ಪದಾಧಿಕಾರಿಗಳು ಮಹಿಳಾ ಸಂಚಾಲನ ಸಮಿತಿ ಪ್ರ. ಸಂಚಾಲಕಿ ಲೀಲಾವತಿ ಪನಕಜೆ ಹಾಗೂ ಪದಾಧಿಕಾರಿಗಳು, ಯುವವಾಹಿನಿ ಸಂಚಾಲನ ಸಮಿತಿ ಮುಂಡಾಜೆ ಕಾರ್ಯದರ್ಶಿ ಜಿತೀಕ್ಷ, ಕ್ರೀಡಾ ಸಂಚಾಲಕ ಸಂತೋಷ್, ಯಶೋಧರ ಮುಂಡಾಜೆ ಹಾಗೂ ಪದಾಧಿಕಾರಿಗಳು ಸಲಹೆಗಾರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಯುವವಾಹಿನಿ ಸದಸ್ಯರೆಲ್ಲರೂ ಹಳದಿ ಟೀ ಶರ್ಟ್ ಧರಿಸಿದ್ದರು. ಮದ್ಯಾಹ್ನ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಶಾಲಾ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲಾರೂ ಒಟ್ಟಾಗಿ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.