Site icon Suddi Belthangady

ಉಜಿರೆ: ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ ಆಡಳಿತ ಮಂಡಳಿಯ 15 ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆ

ಬೆಳ್ತಂಗಡಿ: ತಾಲೂಕು ಉಜಿರೆ ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ 15 ನಿರ್ದೇಶಕರ ಸ್ಥಾನಕ್ಕೆ ಸೆ.21ರಂದು ನಿಗದಿಯಾಗಿದ್ದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೆ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಹಕಾರಿ ಸಂಘ- ಸಂಸ್ಥೆಗಳು ಸ್ಥಾನದಿಂದ ಹಾಲಿ ಅಧ್ಯಕ್ಷ ಶ್ರೀಧರ ಜಿ. ಭಿಡೆ, ಸಾಮಾನ್ಯ ಸ್ಥಾನ ಬೆಳ್ತಂಗಡಿ ಫಿರ್ಕಾದಿಂದ ಹಾಲಿ ಉಪಾಧ್ಯಕ್ಷ ಅನಂತ ಭಟ್ ಮುಚ್ಚಿಮಲೆ, ಹಿಂದುಳಿದ ವರ್ಗ ಎ ಮೀಸಲು ಸ್ಥಾನ ಬೆಳ್ತಂಗಡಿ ಫಿರ್ಕಾದಿಂದ ಸೋಮನಾಥ ಬಂಗೇರ ವರ್ಪಾಳೆ ಅಳದಂಗಡಿ, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನ ಕೊಕ್ಕಡ ಫಿರ್ಕಾದಿಂದ ಹೆಚ್. ಪದ್ಮಗೌಡ ಬೆಳಾಲು, ಗ್ರೇಸಿಯನ್ ವೇಗಸ್ ಕನ್ಯಾಡಿ-|| ಕಲ್ಮಂಜ, ಮತ್ತು ಬಾಲಕೃಷ್ಣ ಗೌಡ ಕೇರಿಮಾ‌ರ್, ಸಾಮಾನ್ಯ ಸ್ಥಾನ ವೇಣೂರು ಫಿರ್ಕಾದಿಂದ ಡಾ. ಶಶಿಧರ ಡೋಂಗ್ರೆ ಶೇಣೆರೆಬೈಲ್‌ ಅಳದಂಗಡಿ, ಸಾಮಾನ್ಯ ಸ್ಥಾನ ಕೊಕ್ಕಡ ಫಿರ್ಕಾದಿಂದ ಶಾಜಿ ಪಿ.ಎ ಶಿಬಾಜೆ, ಕೆ.ಜೆ ಆಗಸ್ಟೀನ್ ಪೆರ್ಮಾಣು ನಡ, ಭರತ್ ಕುಮಾರ್ ಹೆಚ್. ಇಂದಬೆಟ್ಟು ಬಂಗಾಡಿ, ತಿಮ್ಮಪ್ಪ ಗೌಡ ಪಿ. ಬನ್ನಂದೂರು ಬೆಳಾಲು, ಮಹಿಳಾ ಮೀಸಲು ಸ್ಥಾನದಿಂದ ಸುಭಾಷಿಣಿ ಆ‌ರ್. ಮಠದಬೈಲು ಬೆಳ್ತಂಗಡಿ, ಜಯಶ್ರೀ ಡಿ.ಎಂ. ಉಜಿರೆ, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಬೈರಪ್ಪ ಕಲ್ಲಗುಡ್ಡೆ ಕಳೆಂಜ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಕೆ. ರಾಮನಾಯ್ಕ ಕಾಯರ್ತಡ್ಕ ಕಳೆಂಜ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಪುತ್ತೂರು ಉಪ ಸಹಾಯಕ ನಿಬಂಧಕ ಎಂ. ರಘು ಕಾರ್ಯನಿರ್ವಹಿಸಿದ್ದರು. ಉಜಿರೆ ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘುದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜು ಶೆಟ್ಟಿ ಸಹಕರಿಸಿದರು.

Exit mobile version