Site icon Suddi Belthangady

ಬಾಬು ಅವರಿಗೆ ಕಾಮೋಡ್ ವೀಲ್ ಚೇಯರ್ ವಿತರಣೆ

ಕರಾಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಗುರುವಾಯನಕೆರೆ, ತಣ್ಣೀರುಪಂತ ವಲಯ, ಕರಾಯ ಕಾರ್ಯಕ್ಷೇತ್ರದ ಬಾಬು ಅವರಿಗೆ ಜಲಮಂಗಲ ಕಾರ್ಯಕ್ರಮದ ಅಡಿಯಲ್ಲಿ ಕಾಮೋಡ್ ವೀಲ್ ಚೇಯರನ್ನು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ತಾಲೂಕು ಅಧ್ಯಕ್ಷ ಜಗದೀಶ ಶೆಟ್ಟಿ ಮೈರ ಸೆ.14ರಂದು ಕರಾಯದಲ್ಲಿ ವಿತರಿಸಿದರು.

ತಣ್ಣೀರುಪಂತ ವಲಯದ ವಲಯಾಧ್ಯಕ್ಷ ರಾಜಶೇಖರ್ ರೈ, ನಿಕಟಪೂರ್ವ ಅಧ್ಯಕ್ಷ ರಘುರಾಮ್ ಶೆಟ್ಟಿ, ವಲಯ ಮೇಲ್ವಿಚಾರಕ ವಿಶ್ವನಾಥ್ ಪೂಜಾರಿ, ಸೇವಾ ಪ್ರತಿನಿಧಿ ಸುಜಾತ, ಒಕ್ಕೂಟದ ಕೋಶಾಧಿಕಾರಿ ಬಾಲಕೃಷ್ಣ ಕುಲಾಲ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯ ದಯಾನಂದ ಪಿ. ಹಾಗೂ ಮನೆಯ ಸದಸ್ಯರು ಉಪಸ್ಥಿತರಿದ್ದರು.

Exit mobile version