ನಾವೂರು: ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಗ್ರಾ.ಪಂ ಅಧ್ಯಕ್ಷೆ ಸುನಂದ ಅವರ ಅಧ್ಯಕ್ಷತೆಯಲ್ಲಿ ಸೆ.15ರಂದು ನಾವೂರು ದ.ಕ.ಜಿ.ಪಂ.ಹಿ.ಪ್ರಾ ಶಾಲೆಯಲ್ಲಿ ಜರುಗಿತು.
ಮಾರ್ಗದರ್ಶಕ ಅಧಿಕಾರಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿ ಪ್ರಿಯಾ ಆಗ್ನೆಶ್ ಭಾಗವಹಿಸಿ ಗ್ರಾಮಸಭೆಯನ್ನು ಮುನ್ನಡೆಸಿದರು. ಸಭೆಯಲ್ಲಿ ಇಲಾಖಾ ಅಧಿಕಾರಿಗಳಿಂದ ವಿವಿಧ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಗ್ರಾಮ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನಂದ, ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಗಣೇಶ್ ಗೌಡ, ಹರೀಶ್ ಸಾಲಿಯಾನ್, ವೇದಾವತಿ, ಶಾಂತಿ, ಗ್ರಾಮ ಆಡಳಿತ ಅಧಿಕಾರಿ ನಿರೀಕ್ಷಾ ಪಿ. ಆರ್., ಬೆಳ್ತಂಗಡಿ ಪೊಲೀಸ್ ಠಾಣೆ ನಂದ ಎಂ., ಮೋಹನ ಕೆ., ಸಿ.ಎಚ್.ಓ. ಕಾವ್ಯ ಕೆ., ಪಿ.ಎಚ್.ಸಿ.ಓ. ಪುಷ್ಪಲತಾ, ರಾಜವರ್ಮ, ಬೆಳ್ತಂಗಡಿ ಕೃಷಿ ಇಲಾಖೆಯ ಗಣೇಶ್, ಲಕ್ಷ್ಮಿ ಬಿ.ಎಸ್., ಬೆಳ್ತಂಗಡಿ ಮೆಸ್ಕಾಂ ಸಹಾಯಕ ಇಂಜಿನಿಯರ್ ಬೂಬ ಶೆಟ್ಟಿ, ನಾವೂರು ಪ್ರೌಢಶಾಲಾ ಶಿಕ್ಷಕಿ ನಿಖಿಲಾ ಕೆ.ಎಸ್., ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರೋಹಿಣಿ ಕೆ., ಉಷಾ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ನಿಕಟ ಪೂರ್ವ ಅಧ್ಯಕ್ಷ ಗಣೇಶ್ ಗೌಡ ಸ್ವಾಗತಿಸಿದರು. ಪಿಡಿಒ ಪೂರ್ಣಿಮಾ ಜೆ. ಅನುಪಾಲನ ವರದಿ ವಾಚಿಸಿದರು. ಸಿಬ್ಬಂದಿ ವನಜಾ ಜಮಾ ಖರ್ಚು ವಿವರ ಮಂಡಿಸಿದರು. ಸಿಬಂದಿ ರಶ್ಮಿ ವಾರ್ಡ್ ಸಭೆ ವರದಿ ವಾಚಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.