Site icon Suddi Belthangady

ಮಹಾಮಂಡಲೇಶ್ವರ ಕನ್ಯಾಡಿ ಶ್ರೀಗಳಿಂದ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಶ್ರೀ ಶಾರದೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಧರ್ಮಸ್ಥಳ: ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಾಧಿಪತಿ, 1008 ಮಹಾಮಂಡಲೇಶ್ವರ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಕನ್ಯಾಡಿ ಕ್ಷೇತ್ರದಲ್ಲಿ ಸೆ.14ರಂದು ಗೌರವಿಸಲಾಯಿತು.

ಬಳಿಕ ಸ್ವಾಮೀಜಿ ಅವರು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ವತಿಯಿಂದ ಸೆ. 28ರಂದು ನಡೆಯುವ ಮೂರನೇ ವರ್ಷದ ವಿಜೃಂಭಣೆಯ ಶ್ರೀ ಶಾರದೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮವು ಭಗವಂತನ ಅನುಗ್ರಹದಿಂದ ಸುಸೂತ್ರವಾಗಿ ನಡೆಯಲಿ ಎಂದು ಆಶೀರ್ವದಿಸಿದರು.

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ಬಳಂಜ, ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಬೊಂಟ್ರೋಟ್ಟು, ಕಾರ್ಯದರ್ಶಿ ರಂಜಿತ್ ಪೂಜಾರಿ ಮಜಲಡ್ಡ, ಕೋಶಾಧಿಕಾರಿ ಪ್ರವೀಣ್ ಕುಮಾರ್ ಹೆಚ್.ಎಸ್,, ಜೊತೆ ಕಾರ್ಯದರ್ಶಿ ದಿನೇಶ್ ಪೂಜಾರಿ ನಿಟ್ಟಡ್ಕ, ನಿರ್ದೇಶಕರಾದ ಸಂತೋಷ್ ಕುಮಾರ್ ಕಾಪಿನಡ್ಕ, ಜಗದೀಶ್ ಪೂಜಾರಿ ಬಳ್ಳಿದಡ್ಡ, ದಿನೇಶ್ ಪೂಜಾರಿ ಅಂತರ, ಮನೋಹರ್ ಬಳಂಜ, ಯತೀಶ್ ವೈ.ಎಲ್. ಬಳಂಜ, ದೀಪಕ್ ಹೆಚ್.ಡಿ ಸಂಧ್ಯಾದೀಪ, ಸಂತೋಷ್ ಕುಮಾರ್ ಹಿಮರಡ್ಡ, ವಿಜಯ್ ಪೂಜಾರಿ ಯೈಕುರಿ, ರತ್ನಾಕರ ಪೂಜಾರಿ ಕೆಂಪುಂರ್ಜ, ಪ್ರದೀಪ್ ಕಾಪಿನಡ್ಕ, ಯೋಗೀಶ್ ಕೊಂಗುಳ, ಪ್ರವೀಣ್ ಡಿ. ಕೋಟ್ಯಾನ್ ದರ್ಖಾಸು, ಸಂತೋಷ್ ಕಡೆಂಗಾಲು, ಸಂಘದ ಮಾಜಿ ಕಾರ್ಯದರ್ಶಿ ಸದಾನಂದ ಸಾಲಿಯಾನ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್ ಬಾಕ್ಯರಡ್ಡ ಉಪಸ್ಥಿತರಿದ್ದರು.

Exit mobile version