ಉಜಿರೆ: ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ 2024-25ನೇ ಸಾಲಿನ ಸಾಮಾನ್ಯ ಸಭೆಯು ಉಜಿರೆಯ ಸಂತ ಅಂತೋನಿ ಚರ್ಚ್ ನ ಅನುಗ್ರಹ ಸಭಾ ಭವನದಲ್ಲಿ ಸೆ.
14ರಂದು ನಡೆಯಿತು.
ಅನುಗ್ರಹ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ವಲೇರಿಯನ್ ರೋಡ್ರಿಗಸ್ ಅಧ್ಯಕ್ಷತೆ ವಹಿಸಿದ್ದರು. ಉಜಿರೆ ಸಂತ ಅಂತೋನಿ ಚರ್ಚ್ ಗುರು ಫಾ. ಅಬೆಲ್ ಲೋಬೊ ಆಶೀರ್ವಾಚನಗೈದರು.
ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಹಿರಿಯ ಸದಸ್ಯ ಹೆರಾಲ್ಡ್ ಡಿಸೋಜ ದೀಪ ಬೆಳಗಿಸಿ ಚಾಲನೆ ನೀಡಿದರು. ಅಧ್ಯಕ್ಷರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘ ಸ್ಥಾಪನೆಗೊಂಡು 14 ವರ್ಷಗಳನ್ನು ಪೂರೈಸಿ ಇದೀಗ 15ನೇ ವರ್ಷಕ್ಕೆ ಪಾದಾರ್ಪನೆಗೊಂಡಿದೆ.
ಆಡಳಿತ ಮಂಡಳಿಯವರ ಸಹಕಾರ, ಸದಸ್ಯರ ರಚನಾತ್ಮಕ ಸಹಕಾರ ಮತ್ತು ಸಿಬ್ಬಂದಿ ವರ್ಗದವರ ವೃತ್ತಿಪರತೆಯಿಂದಾಗಿ ಇದು ಸಾಧ್ಯವಾಗಿದೆ ಎಂದು ಹೇಳಿದರು. ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕಾಗಿ ನಾನು ನಿಮಗೆಲ್ಲರಿಗೂ ಋಣಿಯಾಗಿದ್ದೇನೆ ಎಂದು ಹೇಳಿದ ಅವರು ಸಂಘದಲ್ಲಿ ಒಟ್ಟು 4505ಸದಸ್ಯರನ್ನೊಳ ಗೊಂಡು ರೂ. 69.74ಕೋಟಿ ಠೇವಣಿ ಸಂಗ್ರಹಿಸಿ ರೂ. 53.26ಕೋಟಿ ಸಾಲ ವಿತರಿಸಿ, ರೂ. 238ಕೋಟಿ ವ್ಯವಹಾರ ನಡೆಸಿ 1.26ಕೋಟಿ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ. 17 ಡಿವಿಡೆಂಡ್ ಘೋಷಿಸಿದರು.
2024-25ನೇ ಸಾಲಿನಲ್ಲಿ ವೈದ್ಯಕೀಯ ನಿಧಿ, ಸಾರ್ವಜನಿಕ ಹಿತಾಸಕ್ತಿ ನಿಧಿ ಮತ್ತು ಮರಣೋತ್ತರ ನಿಧಿಗಳಿಂದ ಸಹಾಯಧನ, ಸಾಧಕರಿಗೆ ಸನ್ಮಾನ, ಪಿಗ್ಮಿ ಸಂಗ್ರಾಹಕರಿಗೆ ಉತ್ತೇಜಕ ಮೊತ್ತ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಗಿದೆ. ನಮ್ಮ ಸಂಘದ ಎಲ್ಲಾ ವ್ಯವಹಾರಗಳಲ್ಲಿ ಕಾನೂನು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ಇದರಿಂದಾಗಿ ಸಂಘ ಸಾಲ ನೀಡುವಿಕೆ ಮತ್ತು ವಸೂಲಾತಿಯಲ್ಲಿ ಗರಿಷ್ಠ ಸಾಧನೆ ಮಾಡಲು ಸಾಧ್ಯವಾಗಿದೆ. ನಮ್ಮ ಈ ಅನುಗ್ರಹ ಸಹಕಾರ ಸಂಘ ಜನರ ಪಾಲ್ಗೊಳ್ಳುವಿಕೆ ಮತ್ತು ಅಭಿವೃದ್ಧಿಗೆ ಪೂರಕವಾಗಿದೆ.
ಉಪಾಧ್ಯಕ್ಷ ಅನಿಲ್ ಪ್ರಕಾಶ್ ಡಿಸೋಜಾ, ನಿರ್ದೇಶಕರಾದ ಸುನಿಲ್ ಸಂತೋಷ್ ಮೊರಾಸ್, ಅರುಣ್ ಸಂದೇಶ್ ಡಿಸೋಜಾ, ಗೀತಾ ಫೆಲ್ಸಿಯಾನಾ ಡಿಸೋಜ, ಫೆಲಿಕ್ಸ್ ಡಿಸೋಜಾ, ವಲೇರಿಯನ್ ಕ್ರಾಸ್ತಾ, ಮೇಬುಲ್ ಪ್ಲಾವಿಯಾ ಲೋಬೊ,ರೋಷನ್ ರೊಡ್ರಿಗಸ್ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಅನಿಲ್ ಪ್ರಕಾಶ್ ಡಿಸೋಜಾ ಸ್ವಾಗತಿಸಿದರು. ನಿರ್ದೇಶಕರಾದ ವಲೇರಿಯನ್ ಕ್ರಾಸ್ತಾ ಪ್ರಾರ್ಥನೆ ನೆರವೇರಿಸಿದರು. ಸನ್ಮಾನಿತರ ಪರಿಚಯವನ್ನು ನಿರ್ದೇಶಕ ಸುನಿಲ್ ಮೊರಾಸ್, ವಿದ್ಯಾರ್ಥಿ ವೇತನ ಪಟ್ಟಿಯನ್ನು ಸಿಬ್ಬಂದಿ ಪ್ರಿಯಾ ಪಿಂಟೊ ಹೇಳಿದರು.
ಪಿ.ಹೆಚ್.ಡಿ ಪದವಿ ಪುರಸ್ಕೃತ ಡಾ. ಟೈಸನ್ ಬ್ಯಾಫ್ಟಿಸ್ಟ್ ಡಿಕುನ್ಹ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ಪಿಯುಸಿ ಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 7ನೇ ಸ್ಥಾನ ಪಡೆದ ಜೋಶನ್ ರಫಯೆಲ್ ಡಿಸೋಜಾ, ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶಾರನ್ ಡಿಸೋಜಾ ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ, ಗುರುವಾಯನಕೆರೆ ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿನಿ ಜೇನಿಷಾ ಪಿರೇರಾ, ಎಸ್ ಎಸ್ ಎಲ್ ಸಿ ಯಲ್ಲಿ 615ಅಂಕ ಗಳಿಸಿದ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ, ಅನಾರೋಗ್ಯದಿಂದ ಬಳಲುತ್ತಿರುವ ಆರ್ಥಿಕ ನೆರವು, ಪಿಗ್ಮಿ ಸಂಗ್ರಾಹಕರಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.ನಿರ್ದೇಶಕಿ ಗೀತಾ ಫೆಲ್ಸಿಯಾನಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಮೇಬುಲ್ ಪ್ಲಾವಿಯಾ ಲೋಬೊ ವಂದಿಸಿದರು.