Site icon Suddi Belthangady

ನಾರಾವಿ: ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ-ರೂ.272 ಕೋಟಿ ವ್ಯವಹಾರ, ರೂ.88 ಲಕ್ಷ ಲಾಭ

ನಾರಾವಿ: ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಎನ್ ಸುಧಾಕರ್ ಭಂಡಾರಿ ಅಧ್ಯಕ್ಷತೆಯಲ್ಲಿ ಸೆ.14ರಂದು ಸಂಘದ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಸುಧಾಕರ್ ಭಂಡಾರಿ ಮಾತನಾಡಿ ಸಂಘವು ವರ್ಷಾಂತ್ಯದಲ್ಲಿ 28.76 ಕೋಟಿ ಠೇವಣಿ ಹೊಂದಿರುತ್ತದೆ. ವರದಿ ಸಾಲಿನಲ್ಲಿ ರೂ.50.81 ಕೋಟಿ ಸಾಲವನ್ನು ವಿವಿಧ ಉದ್ದೇಶಗಳಿಗೆ ವಿತರಿಸಿದ್ದು ಸದಸ್ಯರು ಸಾಲದ ಹೊರಬಾಕಿ ರೂ.43.89 ಕೋಟಿ ಇದ್ದು ವಿತರಿಸಿದ ಸಾಲದ ಪೈಕಿ 100 ಶೇಕಡಾ ಸಾಲ ಮರುಪಾವತಿ ಯಾಗಿರುತ್ತದೆ. ಹಾಗೂ 272 ಕೋಟಿ ವ್ಯವಹಾರ ನಡೆಸಿ, 88 ಲಕ್ಷ ಲಾಭ ಬಂದಿರುತ್ತದೆ ಎಂದು ಸಂಘದ ಅಧ್ಯಕ್ಷ ಸುಧಾಕರ್ ಭಂಡಾರಿ ಹೇಳಿದರು.

ಸಂಘದ ಉಪಾಧ್ಯಕ್ಷ ಜಗದೀಶ್ ಹೆಗ್ಡೆ, ನಿರ್ದೇಶಕರಾದ ವಿಠಲ ಪೂಜಾರಿ, ರಾಜೇಂದ್ರ ಕುಮಾರ್, ಕೃಷ್ಣಪ್ಪ ಪೂಜಾರಿ, ಉಮೇಶ್ ಎಂ.ಕೆ, ಶೇಖರ್, ಯಶೋಧ, ಸುಜಲತಾ, ಪದ್ಮಶ್ರೀ, ಸುಪ್ರಿಯಾ, ವಲಯ ಮೇಲ್ವಿಚಾರಕ ಸಿರಾಜುದ್ದೀನ್ ಉಪಸ್ಥಿತರಿದ್ದರು.

ನಿರ್ದೇಶಕ ಕೃಷ್ಣಪ್ಪ ಪೂಜಾರಿ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಕಾಂತ್ ಜೈನ್ ವರದಿ ಮಂಡಿಸಿದರು, ನಿರ್ದೇಶಕಿ ಪದ್ಮಶ್ರೀ ಧನ್ಯವಾದವಿತ್ತರು.

Exit mobile version