Site icon Suddi Belthangady

ತೆಕ್ಕಾರು: ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ-ರೂ.111 ಕೋಟಿ ವ್ಯವಹಾರ, ರೂ.24 ಲಕ್ಷ ಲಾಭ

ಬೆಳ್ತಂಗಡಿ: ತೆಕ್ಕಾರು ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ ಸಂಘದ ಅಧ್ಯಕ್ಷ ಬಿ. ಅಬ್ದುಲ್ ರಝಾಕ್ ಅಧ್ಯಕ್ಷತೆಯಲ್ಲಿ ಸೆ.13 ರಂದು ತೆಕ್ಕಾರು ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಅಧ್ಯಕ್ಷ ಬಿ. ಅಬ್ದುಲ್ ರಝಾಕ್ ಮಾತನಾಡಿ ಪ್ರಸಕ್ತ ವರ್ಷದಲ್ಲಿ 111 ಕೋಟಿ ರೂ. ವ್ಯವಹಾರ ನಡೆಸಿ ಶೇ.100ರಷ್ಟು ಸಾಲ ವಸೂಲಾತಿ ನಡೆಸಿ 24 ಲಕ್ಷ ಲಾಭ ಗಳಿಸಿದ್ದು ಲೆಕ್ಕ ಪರಿಶೋಧನೆಯಲ್ಲಿ ಎ. ಗ್ರೇಡ್ ಪಡೆದಿದೆ. ಸಂಘಕ್ಕೆ ಸತತ ಐದನೇ ಬಾರಿ ಜಿಲ್ಲಾ ಬ್ಯಾಂಕಿನಿಂದ ಸಾಲ ವಸೂಲಾತಿಗೆ ಪ್ರಶಸ್ತಿ ಬಂದಿದೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಶೇಖರ್ ಪೂಜಾರಿ, ನಿರ್ದೇಶಕರಾದ ಅಬ್ದುಲ್ ರಹಿಮಾನ್, ಅಬ್ದುಲ್ ಮುನೀರ್, ಎಸ್.ಬಿ.ಇಬ್ರಾಹಿಂ, ಸತೀಶ್ ಪೂಜಾರಿ, ಕೃಷ್ಣಪ್ಪ ಮೂಲ್ಯ, ರವಿ, ವಸಂತಿ, ರಾಜೇಶ್ವರಿ ರಮೇಶ್, ಜೀನತ್ , ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಸಿರಾಜುದ್ದೀನ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಅಡಪ ಉಪಸ್ಥಿತರಿದ್ದರು.

ಸನ್ಮಾನ: ಅಡಿಕೆ ಮರಗಳಿಗೆ ಶಿಲೀಂದ್ರ ದ್ರಾವಣ ಸಿಂಪಡಿಸುವ ಕಾರ್ಮಿಕರಾದ ಅಬ್ದುಲ್ ಹಮೀದ್ ಕುಡೋಲು, ತನಿಯಪ್ಪ ನಾಯ್ಕ್ ಬಾಜಾರು, ಅಬ್ದುಲ್ ಆರಿಸ್ ಬೈಲಮೇಲು, ಆದಂ ಬೊಮ್ಮಕೋಡಿ, ಬಾಬು ಶೇಖರ ಬಸವನಕೆರೆ, ಜಯಾನಂದ ಪೂಜಾರಿ ಆನಲ್ಕೆ, ಖಾಲಿದ್ ಬಿತ್ತುಪಾದೆ, ರವಿ ಕುಟ್ಟಿಕ್ಕಳ, ರಾಮಚಂದ್ರ ಬಾಜಾರು, ಜನಾರ್ದನ ನಾಯ್ಕ್, ಜಯಂತ ಪುರ್ಕಜೆ, ಮೊಹಮ್ಮದ್ ಮರಮ, ಅಬೂಬಕ್ಕರು ಮರಮ, ಜಯಾನಂದ ಕುಲಾಲ್ ಇಂತ್ರಿಬೆಟ್ಟು, ಖಾಸಿಂ ಬಾಗ್ಲೋಡಿ ಹಾಗೂ ಇಬ್ರಾಹಿಂ ಬೈಲಮೇಲು ಅವರನ್ನು ಸನ್ಮಾನಿಸಲಾಯಿತು. ನಾಟಿ ವೈದ್ಯರಾದ ನೀಲಮ್ಮ ಕಜೆಕೋಡಿ ಮತ್ತು ಅವ್ವಮ್ಮ ಕೋಡಿಬೆಟ್ಟು , ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸಿರಾಜುದ್ದೀನ್ ಹಾಗೂ ಲೋಕೇಶ್ ಕೆ.ಮುರುಗೋಳಿ, ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಫಲಿತಾಂಶ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ, ಸನ್ಮಾನಿಸಲಾಯಿತು. ಮೃತಪಟ್ಟ ಸದಸ್ಯರಿಗೆ ಸಾಂತ್ವನ ನಿಧಿ ನೀಡಲಾಯಿತು.

ಸಿಬ್ಬಂದಿ ಪ್ರೇಮಾ ಎನ್‌. ಪ್ರಾರ್ಥಿಸಿದರು. ನಿರ್ದೇಶಕರಾದ ಇನಾಸ್ ರೋಡ್ರಿಗಸ್ ಸ್ವಾಗತಿಸಿ, ಸತೀಶ್ ಪೂಜಾರಿ ನಿರೂಪಿಸಿದರು.

Exit mobile version