ಉಜಿರೆ: ಬೆನಕ ಆಸ್ಪತ್ರೆ ಹೊಸ ಸುಸಜ್ಜಿತ ಆಂಬ್ಯುಲೆನ್ಸ್ ಪರಿಚಯಿಸಿದೆ. ಡಿ ಲೆವೆಲ್ ಐಸಿಯು ಸೌಲಭ್ಯವುಳ್ಳ ಹೊಸ ಆಂಬ್ಯುಲೆನ್ಸ್ ನ್ನು ಬೆನಕ ಆಸ್ಪತ್ರೆಯ ಆಡಳಿತ ನಡೆಸಲು ನಿರ್ದೇಶಕ ಡಾ.ಗೋಪಾಲಕೃಷ್ಣ ಮತ್ತು ಡಾ.ಭಾರತಿ ಅವರು ಆಂಬ್ಯುಲೆನ್ಸ್ ನಲ್ಲಿರುವ ಗಣಪತಿಯ ಮೂರ್ತಿಗೆ ಮಲ್ಲಿಗೆ ಹಾರ ಹಾಕಿ ಉದ್ಘಾಟಿಸಿದರು.
ಈ ಆಂಬ್ಯುಲೆನ್ಸ್ ಆಸ್ಪತ್ರೆಯ ಐಸಿಯುನಂತೆ ಕೆಲಸ ಮಾಡಲಿದ್ದು, ಸಂಪೂರ್ಣ ಹವಾನಿಯಂತ್ರಿತ ಶೈತ್ಯಾಗಾರದ ವ್ಯವಸ್ಥೆಯನ್ನು ಒಳಗೊಂಡಿದ್ದು, ಉಜಿರೆಯಿಂದ ಕಾಶ್ಮೀರದವರೆಗೆ ಬೇಕಾದರೂ ಶವವನ್ನು ಕೆಡದಂತೆ ಸಾಗಿಸಲು ಸಹಕಾರಿಯಾಗಲಿದೆ. ಇಂತಹ ಹೈಟೆಕ್ ವ್ಯವಸ್ಥೆಗಳುಳ್ಳ ಹೊಸ ಆಂಬ್ಯುಲೆನ್ಸನ್ನು 25ನೇ ವರ್ಷದ ಕೊಡುಗೆಯಾಗಿ ತಾಲೂಕಿಗೆ ಪರಿಚಯಿಸಲು ಸಂತೋಷವಾಗುತ್ತದೆ ಎಂದು ಡಾ.ಗೋಪಾಲಕೃಷ್ಣ ಭಟ್ ಸುದ್ದಿಗೆ ತಿಳಿಸಿದ್ದಾರೆ.ಈ ವೇಳೆ ಡಾ.ಆದಿತ್ಯ ರಾವ್, ಡಾ. ಅಂಕಿತಾ ಜಿ ಭಟ್, ಡಾ.ಪ್ರದ್ಯೋತ್, ಪಿ.ಆರ್.ಓ ಎಸ್.ಜಿ. ಭಟ್, ಅಕೌಂಟ್ಸ್ ವಿಭಾಗದ ಆನಂದ್ ಮತ್ತು ಬೆನಕದ ಸಿಬ್ಬಂದಿ ಉಪಸ್ಥಿತರಿದ್ದರು.