
ಉರುವಾಲು: ಶಿವಾಜಿನಗರ ಶ್ರೀ ಮಹಮ್ಮಾಯಿ ಸೇವಾ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷ ಸೀತಾರಾಮ ಅರ್ಬಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಉಪಾಧ್ಯಕ್ಷ ರಾಘವ ನಾಯ್ಕ ಶ್ರೀ ಜಲದುರ್ಗಾ ಅವರ ಉಪಸ್ಥಿತಿಯಲ್ಲಿ ಆ.31ರಂದು ನಡೆಯಿತು.
ಸಭೆಯಲ್ಲಿ ಸಂಘದ ವರದಿಯನ್ನು ಕಾರ್ಯದರ್ಶಿ ಉಮೇಶ್ ನಾಯ್ಕ ಮಂಡಿಸಿದರು. ಸಂಘದ ಭೈಲಾವನ್ನು ಓದಿ ತಿಳಿಸಲಾಯಿತು. ದೇವಸ್ಥಾನದ ಅಭಿವೃದ್ಧಿಗೆ ಜೀರ್ಣೋದ್ಧಾರ ಮಾಡುವ ರೂಪುರೇಷೆಯ ಬಗ್ಗೆ ಚರ್ಚಿಸಲಾಯಿತು. ಸೆ.28ರಂದು ದೇವರನ್ನು ಬಾಲಾಲಯದಲ್ಲಿ ಇಡುವುದನ್ನು ನಿರ್ಧರಿಸಲಾಯಿತು. ಆ. 5ರಂದು ಶಿಲಾನ್ಯಾಸ ನೆರವೇರಿಸುವುದು ಎಂದು ನಿರ್ಧರಿಸಲಾಯಿತು.
ದೇವಸ್ಥಾನದ ಅಭಿವೃದ್ಧಿ ಸಮಿತಿಯನ್ನು ರಚಿಸಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ಎಚ್.ಎಲ್. ಹಲೇಜಿ, ಉಪಾಧ್ಯಕ್ಷರಾಗಿ ರಾಘವ ನಾಯ್ಕ ಶ್ರೀಜಲದುರ್ಗ ಕಾಯರ್ಪಾಡಿ, ಕಾರ್ಯದರ್ಶಿಯಾಗಿ ಚಿದಾನಂದ ನಾಯ್ಕ ಕುಪ್ಪೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಪ್ರವೀಣ್ ನಾಯ್ಕ ಆನಡ್ಕ ಹಾಗೂ ನಾಗೇಶ್ ನಾಯ್ಕ ಬೇತ್ತದ್ದಡ್ಕ, ಕೋಶಾಧಿಕಾರಿಯಾಗಿ ಪುಷ್ಪಾನಂದ ಗಜಂತೋಡಿ, ಕೃಷ್ಣಪ್ಪ ನಾಯ್ಕ ಕಲ್ಲಂಡ, ಬಾಲಪ್ಪ ನಾಯ್ಕ ಕೊರಿಂಜ, ಗೌರವ ಸಲಹೆಗಾರರಾಗಿ ಕುಶಾಲಪ್ಪ ನಾಯ್ಕ ಮತ್ರ ಕುಮೇರು, ಚೆನ್ನಕೇಶವ ನಾಯ್ಕ ಅರಸಮಜಲು, ಸಂತೋಷ್ ನಾಯ್ಕ ಅತ್ತಾಜೆ, ಸತೀಶ ಎಚ್.ಎಲ್. ವಕೀಲರು ಬೆಳ್ತಂಗಡಿ, ಧನಂಜಯ ಎಚ್. ಹಲೇಜಿ, ಧರ್ಣಪ್ಪ ನಾಯ್ಕ ಆನಡ್ಕ, ರಾಮಣ್ಣ ನಾಯ್ಕ ಗುರುಕೃಪಾ ಕಾಯರ್ಪಾಡಿ, ಹರೀಶ್ ನಾಯ್ಕ ಪಾರಡ್ಕ, ಉಮಣ ನಾಯ್ಕ ಕೊರಿಂಜ, ಲಕ್ಷ್ಮಣ ನಾಯ್ಕ ಪಳಿಕೆ, ಉಮೇಶ್ ನಾಯ್ಕ ಪೆಲಪ್ಪರು, ಚಂದ್ರಶೇಖರ ನಾಯ್ಕ ಅಂಬಡ್ಕ, ದಯಾನಂದ ನಾಯ್ಕ ಪಾರಡ್ಕ, ವೆಂಕಪ್ಪ ನಾಯ್ಕ ಬಾಂಕ್ಯ, ರಮೇಶ್ ನಾಯ್ಕ ಬನಾರಿ, ರಾಜೇಂದ್ರ ನಾಯ್ಕ ಬನಾರಿ ಮಜ್ಜೆ, ಶಿವಪ್ಪ ನಾಯ್ಕ ಕೊಯಕ್ಕುಡೆ, ಸಂಜೀವ ನಾಯ್ಕ ಗಜಂತೋಡಿ, ಸೀತಾರಾಮ ನಾಯ್ಕ ಆರ್ಬಿಅವರನ್ನು ಆಯ್ಕೆ ಮಾಡಿ ಉಳಿದವರನ್ನು ಸದಸ್ಯರನ್ನಾಗಿ ಆರಿಸಲಾಯಿತು.
ಕಿಶನ್ ನಾಯ್ಕ ಮಜ್ಜೆ ಪ್ರಾರ್ಥಿಸಿದರು. ಕೃಷ್ಣಪ್ಪ ನಾಯ್ಕ ಸ್ವಾಗತಿಸಿದರು. ಕಾರ್ಯಕ್ರಮವನ್ನು ಚಿದಾನಂದ ನಾಯ್ಕ ಕುಪ್ಪೆಟ್ಟಿ ನಿರೂಪಿಸಿದರು.