ಗುರುವಾಯನಕೆರೆ: ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಕ್ರಾಂತಿಗೆ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರಿಗೆ ANYELP ಗ್ರೂಪ್ಸ್ ಪ್ರತಿಷ್ಠಿತ ಭಾರತೀಯ ಶಿಕ್ಷಣ ರತ್ನ ಪ್ರಶಸ್ತಿ- 2025 ನೀಡಿ ಗೌರವಿಸಿದೆ.
ಬೆಂಗಳೂರಿನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಸೆ.12ರಂದು ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು. 2019ರಲ್ಲಿ ಗುರುವಾಯನಕೆರೆ 254 ಮಕ್ಕಳಿಂದ ಪ್ರಾರಂಭಗೊಂಡ ಎಕ್ಸೆಲ್ ಶಿಕ್ಷಣ ಸಂಸ್ಥೆ ಇದೀಗ 5000ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಸುಮಾರು 800 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಸದುದ್ದೇಶವನ್ನು ಇಟ್ಟುಕೊಂಡು ಸಂಸ್ಥೆ ಪ್ರಾರಂಭಿಸಲಾಗಿದೆ. ತಮ್ಮ ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಬೇಕು ಎನ್ನುವ ಕನಸು ಕಾಣುವುದು ತಪ್ಪಲ್ಲ, ಆದರೆ ಎಕ್ಸೆಲ್ ಕಾಲೇಜು ಅವರನ್ನು ಉತ್ತಮ ಇಂಜಿನಿಯರ್, ಉತ್ತಮ ಡಾಕ್ಟರ್ ಮಾಡುವ ಕನಸು ಕಂಡು ಅದನ್ನು ಸಾಧಿಸಿ ತೋರಿಸಿದೆ. ನುರಿತ ಉಪನ್ಯಾಸಕರ ತಂಡ ಕಾಲೇಜಿನಲ್ಲಿ ಇದ್ದು ಉತ್ತಮ ಹಾಸ್ಟೆಲ್ ಸೌಲಭ್ಯಗಳು ಇಲ್ಲಿದೆ. ಸಿಇಟಿ, ನೀಟ್, ಜೆಯುಯು ಇನ್ನಿತರ ಬೇರೆ ಬೇರೆ ಪರೀಕ್ಷಾ ತಯಾರಿ ಬಗ್ಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಎಸ್.ಎಸ್.ಎಲ್.ಸಿ ಮಕ್ಕಳಿಗೆ ಒಂದು ತಿಂಗಳ ಕಾಲ ಮಾಹಿತಿ ಕಾರ್ಯಗಾರದ ಜೊತೆಗೆ ವೇಣೂರುನಲ್ಲಿಯು ಸಂಸ್ಥೆ ಪ್ರಾರಂಭಿಸಿ ಗುರುವಾಯನಕೆರೆ ವಿದ್ಯಾಸಾಗರ ಕ್ಯಾoಪಾಸ್ನಲ್ಲಿ ಶೈಕ್ಷಣಿಕ ಸಾಲಿನಲ್ಲಿ ಪೂರ್ವ ಪ್ರಾಥಮಿಕ ಟೇಕ್ನೋ ಸ್ಕೂಲ್ ಪ್ರಾರಂಭಗೊಂಡು ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿ ಸೈ ಎನಿಸಿಕೊಂಡ ಸಂಸ್ಥೆಯಾಗಿ ಎಕ್ಷೆಲ್ ಸಂಸ್ಥೆ ಹೊರಹೋಮ್ಮಿದೆ. ಎಕ್ಸೆಲ್ ಕಾಲೇಜಿನಲ್ಲಿ ಕಲಿತ ಪ್ರತಿ ವಿದ್ಯಾರ್ಥಿ ಹೆತ್ತವರಿಗೆ,ಸಮಾಜಕ್ಕೆ ಆಸ್ತಿಯಾಗಬೇಕು. ಊರಿಗೆ ಕೀರ್ತಿ ತರಬೇಕು. ದೇಶಕ್ಕೆ ಶಕ್ತಿಯಾಗಬೇಕು ಎಂಬ ಚಿಂತನೆ ಸುಮಂತ್ ಕುಮಾರ್ ಜೈನ್ ಅವರದು.
ಹಲವಾರು ಪ್ರಶಸ್ತಿಗಳು: ಸುಮಂತ್ ಕುಮಾರ್ ಜೈನ್ ಅವರಿಗೆ ಸುವರ್ಣ ರಾಷ್ಟ್ರೀಯ ವಾಹಿನಿ ಹಾಗೂ ಕನ್ನಡ ಪ್ರಭ ಪತ್ರಿಕೆಯ ಉಜ್ವಲ ಉದ್ಯಮಿ ಪ್ರಶಸ್ತಿ, ಬೆಹರಿನ್ – ಇಂಡಿಯಾ ಅಂತಾರಾಷ್ಟ್ರೀಯ ಪ್ರಶಸ್ತಿ, ಮಲೇಷಿಯಾ – ಇಂಡಿಯಾ ಐಕಾನಿಕ್ ಅವಾರ್ಡ್, ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಅತ್ಯುತ್ತಮ ಯುವ ಸಾಧಕ ಪ್ರಶಸ್ತಿ, ಯಕ್ಷ ಭಾರತಿ ದಶಮಾನೋತ್ಸವ ಪುರಸ್ಕಾರ, ವಿಜಯವಾಣಿ ಪತ್ರಿಕೆ ಕೊಡಮಾಡುವ ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಪುರಸ್ಕಾರಗಳು ಸಂದಿವೆ.